ಬಾಗ್ದಾದ್ (ಎಎಫ್ಪಿ): ನಗರದ ಆಸ್ಪತ್ರೆಯೊಂದರ ಬಳಿ ಶುಕ್ರವಾರ ಅಂತ್ಯಸಂಸ್ಕಾರ ಮೆರವಣಿಗೆಯೊಂದು ಸಾಗುತ್ತಿದ್ದಾಗ ಕಾರ್ ಬಾಂಬ್ ಸ್ಫೋಟಿಸಿ 28 ಜನ ಮೃತಪಟ್ಟಿದ್ದಾರೆ.
ಆತ್ಮಾಹುತಿ ದಳಕ್ಕೆ ಸೇರಿದಾತ ಸ್ಫೋಟಕ ಸಾಮಗ್ರಿ ತುಂಬಿದ ಕಾರನ್ನು ಸ್ಫೋಟಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಒಳಾಡಳಿತ ಸಚಿವಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.
ರಿಯಲ್ ಎಸ್ಟೇಟ್ ಏಜೆಂಟ್ ಮಹಮ್ಮದ್ ಮಲಿಕಿ, ಆತನ ಪತ್ನಿ ಮತ್ತು ಪುತ್ರನನ್ನು ಕೊಲೆ ಮಾಡಲಾಗಿತ್ತು. ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಸಂಭವಿಸಿದ ಈ ಸ್ಫೋಟದಲ್ಲಿ ಇತರೆ 50 ಜನ ಗಾಯಗೊಂಡಿದ್ದಾರೆ.
ಇರಾಕ್ನಲ್ಲಿ ಶಿಯಾಪಂಥ ನೇತೃತ್ವದ ಸರ್ಕಾರ ಮತ್ತು ಪ್ರಮುಖ ಸುನ್ನಿ ಪಂಥದವರ ಮಧ್ಯೆ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ್ದು, ಮತೀಯಗಲಭೆಗಳು ಆಗಾಗ ಸಂಭವಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.