ADVERTISEMENT

ಇರಾಕ್ ಸಂಸತ್‌ಗೆ ಚುನಾವಣೆ

ಏಜೆನ್ಸೀಸ್
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಮತದಾನ ಮಾಡಲು ಬಾಗ್ದಾದ್‌ನ ಮತಗಟ್ಟೆಗೆ ಬಂದ ಇರಾಕ್ ಪ್ರಧಾನಿ ಹೈದರ್ ಅಲ್–ಅಬಾದಿ –ಎಎಫ್‌ಪಿ ಚಿತ್ರ
ಮತದಾನ ಮಾಡಲು ಬಾಗ್ದಾದ್‌ನ ಮತಗಟ್ಟೆಗೆ ಬಂದ ಇರಾಕ್ ಪ್ರಧಾನಿ ಹೈದರ್ ಅಲ್–ಅಬಾದಿ –ಎಎಫ್‌ಪಿ ಚಿತ್ರ   

ಬಾಗ್ದಾದ್: ಇರಾಕ್‌ ಸಂಸತ್‌ಗೆ ಶನಿವಾರ ಸಾರ್ವತ್ರಿಕ ಚುನಾವಣೆ ನಡೆಯಿತು.

ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ವಿರುದ್ಧ ಗೆಲುವು ಘೋಷಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

329 ಸದಸ್ಯ ಬಲದ ಸಂಸತ್ತಿಗೆ 7 ಸಾವಿರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾರರ ಸಂಖ್ಯೆ ಸುಮಾರು 2.5 ಕೋಟಿ. ಪರಮಾಣು ಒಪ್ಪಂದದ ಕಾರಣ
ದಿಂದ ಅಮೆರಿಕ ಹಾಗೂ ಇರಾನ್ ಮಧ್ಯೆ ಉಂಟಾಗಿರುವ ಬಿಕ್ಕಟ್ಟು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.