
ಪ್ರಜಾವಾಣಿ ವಾರ್ತೆಟೆಹರಾನ್ (ಎಪಿ): ಸರ್ಕಾರದ ಎಚ್ಚರಿಕೆಯನ್ನು ಕಡೆಗಣಿಸಿರುವ ಇರಾನ್‌ನ ವಿರೋಧಪಕ್ಷಗಳು ಟುನಿಷಿಯಾ ಮತ್ತು ಈಜಿಪ್ಟ್‌ನ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಇಂದು ಶಾಂತಿಯುತ ರ್ಯಾಲಿ ನಡೆಸುವಂತೆ ಜನರಿಗೆ ಕರೆ ನೀಡಿವೆ ಎಂದು ಇರಾನ್‌ನ ಸುಧಾರಣಾವಾದಿ ವೆಬ್‌ಸೈಟ್ ತಿಳಿಸಿದೆ.
ಇರಾನ್‌ನ ವಿರೋಧಪಕ್ಷಗಳು ಶಾಂತಿಯುತ ರ್ಯಾಲಿ ನಡೆಸಲು ಜನರಿಗೆ ಕರೆ ನೀಡಿರುವ ಹೇಳಿಕೆಯನ್ನು ಕಲೇಮೆ ಡಾಟ್ ಕಾಮ್ ಪ್ರಕಟಿಸಿದೆ. ಇದೇ ವೇಳೆ ಸರ್ಕಾರದ ದ್ವಂದ್ವ ನೀತಿಯನ್ನು ವಿರೋಧಪಕ್ಷಗಳು ತಮ್ಮ ಹೇಳಿಕೆಯಲ್ಲಿ ಖಂಡಿಸಿವೆ.
ಇಂದು ವಿರೋಧ ನಡೆಸಲುದ್ದೇಶಿಸಿರುವ ಶಾಂತಿಯುತ ರ್ಯಾಲಿಗೆ ಕಳೆದ ವಾರ ಇರಾನ್ ಸರ್ಕಾರ ಅನುಮತಿ ನಿರಾಕರಿಸಿತ್ತಲ್ಲದೆ ಒಂದು ವೇಳೆ ರ್ಯಾಲಿ ನಡೆದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.