ADVERTISEMENT

ಇರಾನ್: ಕಳ್ಳತನ ಆರೋಪಿಗೆ ಸಾರ್ವಜನಿಕವಾಗಿಯೇ ನೇಣು

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಟೆಹರಾನ್, (ಎಎಫ್‌ಪಿ): ನೌಕಾಪಡೆಯಲ್ಲಿ ದರೋಡೆ ಮತ್ತು ಮಾರ್ಕಜಿ ಪ್ರಾಂತದ ಹಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗೆ ಇರಾನ್ ಸಾರ್ವಜನಿಕವಾಗಿಯೇ ಗಲ್ಲಿಗೇರಿಸಿದೆ. ಇದನ್ನು ಹಾರ್ಡ್‌ಲೈನ್ ಕಯ್ಹಾನ್ ಪತ್ರಿಕೆ ಭಾನುವಾರ ವರದಿ ಮಾಡಿದೆ.

ಪ್ರಾಂತ ನ್ಯಾಯಾಲಯದ ಮುಖ್ಯಸ್ಥ ಹೇಕ್ಮತ್ ಅಲಿ ಮೊಝಫರಿ ಅವರು, ಅಪರಾಧಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆತ ಮೌಸಾ ಅಬಾದ್ ಎಂಬ ಹಳ್ಳಿಯಲ್ಲಿ ಕಳ್ಳತನ ನಡೆಸಲು ಕಾರ್ಯತಂತ್ರ ರೂಪಿಸುತ್ತಿದ್ದ ಎಂದು ವರದಿಯಾಗಿದೆ.

ಮೊಹಾರೆಬೆ (ದೇವರ ವಿರುದ್ಧದ ಹೋರಾಟ)ಯಲ್ಲಿ ಭದ್ರತಾ ಪಡೆಗೆ ಪ್ರತಿರೋಧ ವ್ಯಕ್ತಪಡಿಸಿದ ಪ್ರಕರಣದಲ್ಲಿಯೂ ಈತ ತಪ್ಪಿತಸ್ಥನಾಗಿದ್ದ ಎಂದು ಮೊಝಫರಿ ಹೇಳಿದ್ದಾರೆ.

ADVERTISEMENT

ಇರಾನಿನ ನಾಗರಿಕ ದಂಡ ಸಂಹಿತೆ ಪ್ರಕಾರ ಇದು ಮರಣದಂಡನೆಗೆ ಗುರಿಪಡಿಸಬಹುದಾದ ಅಪರಾಧ ಇದಾಗಿದೆ.

ಮರ್ಕಾಝಿಯ ನ್ಯಾಯಾಂಗ ಇಲಾಖೆಯ ವೆಬ್‌ಸೈಟ್ ಪ್ರಕಾರ, ಮಾದಕ ವಸ್ತು ಸಾಗಣೆ ಆರೋಪದ ಮೇಲೆ ಇನ್ನೂ ಇಬ್ಬರಿಗೆ ಗಲ್ಲು ಶಿಕ್ಷೆ ನೀಡಲಾಗಿದೆ ಎಂದು ತಿಳಿಸಿದೆ. ಇರಾನ್ ಕಾನೂನಿನಲ್ಲಿ  30 ಗ್ರಾಂಗಳಿಗಿಂತ ಹೆಚ್ಚು ಮಾದಕ ವಸ್ತು ಸಂಗ್ರಹಿಸಿದರೆ ಮರಣ ದಂಡನೆ ಶಿಕ್ಷೆಗೆ ಗುರಿ ಪಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.