ADVERTISEMENT

ಇಳಾ ಭಟ್ ಸಾಧನೆಗೆ ಕ್ಲಿಂಟನ್ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 19:30 IST
Last Updated 22 ಜೂನ್ 2012, 19:30 IST

ವಾಷಿಂಗ್ಟನ್ (ಐಎಎನ್‌ಎಸ್): ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಭಾರತದ ಸಾಮಾಜಿಕ ಕಾರ್ಯಕರ್ತೆ ಇಳಾ ಭಟ್ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

`ವಿಶ್ವದ ಅನೇಕ ಸಾಧಕರು ನನಗೆ ಸ್ಫೂರ್ತಿಯಾಗಿದ್ದಾರೆ. ಅವರಲ್ಲಿ ಭಾರತದ ಇಳಾ ಭಟ್ ಸಹ ಒಬ್ಬರು~ ಎಂದು ಹಿಲರಿ ಅವರು ಮಹಿಳೆಯರು ಮತ್ತು ಕುಟುಂಬಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಂಬಾ ಪ್ರತಿಭಾವಂತರಾಗಿರುವ ಇಳಾ ಅವರು ಬೇರೆ ಲಾಭ ತರುವ ಉದ್ಯೋಗ ಮಾಡಬಹುದಾಗಿತ್ತು. ಆದರೆ ಅವರು ಸ್ವ ಉದ್ಯೋಗ ಮಹಿಳಾ ಸಂಘಗಳನ್ನು ಸ್ಥಾಪಿಸಿ  ಕೃಷಿ ಕಾರ್ಮಿಕರು, ಮನೆ ಕೆಲಸದವರನ್ನು ಸಂಘಟಿಸಿ ದುರ್ಬಲ ಮಹಿಳೆಯರಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಹಿಲರಿ ಶ್ಲಾಘಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.