ಕೈರೊ (ಪಿಟಿಐ): ಎರಡು ಸುತ್ತಿನ ಮತದಾನದ ಮೂಲಕ ಈಜಿಪ್ಟ್ನ ವಿವಾದಿತ ಕರಡು ಸಂವಿಧಾನಕ್ಕೆ ಅನುಮೋದನೆ ನೀಡಲಾಗಿದೆ.
ಶೇ 64ರಷ್ಟು ಜನರು ಕರಡು ಸಂವಿಧಾನ ಪರ ಮತ ಹಾಕಿದ್ದಾರೆ. ಸೋಮವಾರ ಅಂತಿಮ ಫಲಿತಾಂಶ ಹೊರಬೀಳಲಿದೆ. `ಶನಿವಾರ ನಡೆದ ಕೊನೆಯ ಸುತ್ತಿನ ಮತದಾನದಲ್ಲಿ ಶೇ 71ರಷ್ಟು ಜನರು ಕರಡು ಸಂವಿಧಾನದ ಪರ ಮತ ಹಾಕಿದ್ದಾರೆ' ಎಂದು ಫ್ರೀಡಂ ಆಂಡ್ ಜಸ್ಟೀಸ್ ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.