
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದಲ್ಲಿರುವ ಉಗ್ರರ ಸುರಕ್ಷಿತ ತಾಣಗಳನ್ನು ನಾಶಪಡಿಸಲು ಅಲ್ಲಿಯ ಸರ್ಕಾರ ನಿರಾಸಕ್ತಿ ತೋರಿಸುತ್ತಿರುವುದೇ ಪಾಕ್ ಗಡಿ ಪ್ರದೇಶ ಸಮಸ್ಯೆಯ ಕಗ್ಗಂಟಾಗಿ ಮಾರ್ಪಡಲು ಕಾರಣ ಎಂದು ಅಮೆರಿಕದ ಪ್ರಮುಖ ಸೇನಾಧಿಕಾರಿ ಜಾನ್ ಟೂಲಾನ್ ಕಟುವಾಗಿ ಟೀಕಿಸಿದ್ದಾರೆ.
ತನ್ನ ನೆಲದ ಜತೆಗೆ ಬಲೂಚಿಸ್ತಾನವನ್ನು ಉಳಿಸಿಕೊಳ್ಳುವುದೇ ಪಾಕ್‌ಗೆ ಈಗ ದೊಡ್ಡ ಸವಾಲಾಗಿದೆ. ಬಲೂಚಿಸ್ತಾನದ ವಿಷಯದಲ್ಲಿ ಪಾಕ್ ಏನಾದರೂ ಮಾಡಲು ಹೊರಟರೆ ಅದು ಜೇನುಗೂಡಿಗೆ ಕೈ ಹಾಕಿದಂತೆ.
ಆದರೆ ಈ ಯಾವುದೇ ವಿಷಯದಲ್ಲಿ ನಾವು ಪಾಕ್ ಸರ್ಕಾರವನ್ನು ಉರುಳಿಸುವ ಇರಾದೆ ಇಲ್ಲ ಎಂದು ಟೂಲಾನ್ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.