ADVERTISEMENT

ಎಚ್-1ಬಿ ವೀಸಾಗೆ 1.24ಲಕ್ಷ ಅರ್ಜಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ವೃತ್ತಿ ಪರರಿಗೆ ನೀಡಲಾಗುವ ಎಚ್-1ಬಿ ವೀಸಾಕ್ಕೆ ಈ ವರ್ಷ 1.24 ಲಕ್ಷ ಅರ್ಜಿಗಳು ಬಂದಿದ್ದು, ಅರ್ಹ 85 ,000 ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.

ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ಏಪ್ರಿಲ್ 7ರಂದು ನಡೆಸಲಾಗಿದೆ ಎಂದು ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್) ಹೇಳಿದೆ.

2013-14ರ ಆರ್ಥಿಕ ವರ್ಷಕ್ಕೆ ಎಚ್-1ಬಿ ವೀಸಾದ ಗರಿಷ್ಠ ಮಿತಿ 85,000. ಇದರಲ್ಲಿ 65,000 ವೀಸಾಗಳನ್ನು ವಿದೇಶದ ವೃತ್ತಿ ಪರರಿಗೆ ಹಾಗೂ 20,000 ವೀಸಾಗಳನ್ನು ಅಮೆರಿಕದಲ್ಲೇ ಶಿಕ್ಷಣ ಪಡೆದ ವಿದೇಶಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.