ADVERTISEMENT

ಎರಡನೇ ಬಾರಿಗೆ ಬುಕರ್ ಪ್ರಶಸ್ತಿ: ಇತಿಹಾಸ ಸೃಷ್ಟಿಸಿದ ಹಿಲರಿ ಮ್ಯಾಂಟೆಲ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:15 IST
Last Updated 17 ಅಕ್ಟೋಬರ್ 2012, 9:15 IST
ಎರಡನೇ ಬಾರಿಗೆ ಬುಕರ್ ಪ್ರಶಸ್ತಿ: ಇತಿಹಾಸ ಸೃಷ್ಟಿಸಿದ ಹಿಲರಿ ಮ್ಯಾಂಟೆಲ್
ಎರಡನೇ ಬಾರಿಗೆ ಬುಕರ್ ಪ್ರಶಸ್ತಿ: ಇತಿಹಾಸ ಸೃಷ್ಟಿಸಿದ ಹಿಲರಿ ಮ್ಯಾಂಟೆಲ್   

ಲಂಡನ್ (ರಾಯಿಟರ್ಸ್): ತಾವು ಬರೆದಿದ್ದ ~ವೂಲ್ಫ್ ಹಾಲ್~ ಕೃತಿಯ ಬಳಿಕ ಇದೀಗ ~ಬ್ರಿಂಗ್ ಅಪ್ ದಿ ಬಾಡೀಸ್~ ಕೃತಿಗೆ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಪಡೆಯುವ ಮೂಲಕ ಎರಡು ಬಾರಿ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಮೊದಲ ಮಹಿಳೆ ಹಾಗೂ ಮೊದಲ ಬ್ರಿಟನ್ ಪ್ರಜೆ ಎಂಬ ಹೆಗ್ಗಳಿಕೆ ಪಡೆಯುವುದರೊಂದಿಗೆ ಹಿಲರಿ ಮಾಂಟೆಲ್ ಅವರು ಬುಧವಾರ ಇತಿಹಾಸ ನಿರ್ಮಿಸಿದರು.

ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದ ಜೆ.ಎಂ. ಗೋಯೆಟ್ಝೀ ಮತ್ತು ಆಸ್ಟ್ರೇಲಿಯಾದ ಪೀಟರ್ ಕ್ಯಾರೀ ಅವರು ಹಿಂದೆ ~ಡಬಲ್ ಬುಕರ್~ ಪ್ರಶಸ್ತಿಗೆ ಪಾತ್ರರಾದ ಪುರುಷರು ಎಂಬ ಹೆಗ್ಗಳಿಕೆ ಗಳಿಸಿದ್ದರು.

ತೀರ್ಪುಗಾರರಾದ ಪೀಟರ್ ಸ್ಟೊಥಾರ್ಡ್ ಅವರು ~ಮಾಂಟೆಲ್ ಅವರು ಆಧುನಿಕ ಇಂಗ್ಲಿಷ್ ನ ಮಹಾನ್ ಗದ್ಯ ಬರಹಗಾರ್ತಿ~ ಎಂದು ಬಣ್ಣಿಸಿದರು. ಐತಿಹಾತಿಕ ಕಥೆ ಬರೆಯುವ ಕಲೆಯನ್ನೇ ಅವರು ಪುನರ ರಚಿಸಿದ್ದಾರೆ~ ಎಂದು ಪೀಟರ್ ಹೇಳಿದರು.

ಕಮ್ಮಾರನ ಮಗನಾದ ಥೋಮ್ಸ್ ಕ್ರೋಮ್ ವೆಲ್ ದೊರೆ 8ನೇ ಹೆನ್ರಿಯ ಸಿಬ್ಬಂದಿ ಪರಿವಾರದಲ್ಲಿ ಅತ್ಯುನ್ನತ ಹುದ್ದೆಗೆ ಏರುವ ಕಥೆಯನ್ನು ಮರುಕಲ್ಪಿಸಿಕೊಂಡು ಬರೆದ ಕೃತಿ ~ವೂಲ್ಫ್ ಹಾಲ್~ 2009ರಲ್ಲಿ 50,000 ಪೌಂಡ್ (80,000 ಡಾಲರ್) ಮೊತ್ತದ ಬುಕರ್ ಪ್ರಶಸ್ತಿಗೆ ಪಾತ್ರವಾಗಿತ್ತು.

ಹಾರ್ಪರ್ ಕಾಲಿನ್ಸ್ ಇಂಪ್ರಿಂಟ್ ಫೋರ್ತ್ ಎಸ್ಟೇಟ್ ಪ್ರಕಟಿಸಿರುವ ~ಬ್ರಿಂಗ್ ಅಪ್ ದಿ ಬಾಡೀಸ್~ ಕೃತಿಯು 1535ರಲ್ಲಿ ಅನ್ನೆ ಬೋಲೆಯಿನ್ ಪತನ ಹಾಗೂ ನಂತರದ ವರ್ಷ ನಡೆದ ಆಕೆಯ ಹತ್ಯೆಯ ಕಥೆಯನ್ನು ಬಣ್ಣಿಸುತ್ತದೆ.

~ಇದು ಅನ್ನೆ ಬೊಲೆಯಿನ್ನಳ ಸಾವಿನ ರಕ್ತಸಿಕ್ತ ಕಥೆ ಮತ್ತು ಆಕೆಯ ಅನ್ವೇಷಣೆ, ಆದರೆ ಮಾಂಟೆಲ್ ಅವರು ರಕ್ತದ ಮೂಲಕ ಚಿಂತಿಸುವ ಬರಹಗಾರ್ತಿ. ಗದ್ಯ ಬರವಣಿಗೆ ಶಕ್ತಿಯನ್ನು ಆಕೆ ನೈತಿಕ ದ್ವಂದ್ವ ಮತ್ತು ರಾಜಕೀಯ ಜೀವನದ ನೈಜ ಅಸ್ತಿರತೆಯನ್ನು ಬಿಂಬಿಸಲು ಬಳಸಿದ್ದಾರೆ~ ಎಂದು ಸ್ಟೊಥಾರ್ಡ್ ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.