ADVERTISEMENT

ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಸಿಂಗಪುರ (ಎಎಫ್‌ಪಿ): ಅಮೆರಿಕ ಮತ್ತು ಜರ್ಮನಿ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಇರಾನ್ ಅಣ್ವಸ್ತ್ರ ತಯಾರಿಕಾ ಭೀತಿಯ ಕಾರಣದಿಂದ ಏಷ್ಯಾ ಮಾರುಕಟ್ಟೆಯಲ್ಲಿ ಶುಕ್ರವಾರ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಾಣಿಸಿತು.

ಅಮೆರಿಕ, ಜರ್ಮನಿಯ ಗುಣಾತ್ಮಕ ಆರ್ಥಿಕ ವರದಿಗಳು ಹಾಗೂ ಇರಾನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವಾರ ತೈಲ ಬೆಲೆ ಅನಿರೀಕ್ಷಿತವಾಗಿ ಏರಿದೆ ಎಂದು ಜಪಾನ್‌ನ ನ್ಯೂ ಎಡ್ಜ್ ಬ್ರೋಕರೇಜ್  ಕಂಪೆನಿಯ ವ್ಯವಸ್ಥಾಪಕ ಕೆನ್ ವೇಸ್ ಗವಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.