ADVERTISEMENT

ಐನ್‌ಸ್ಟೈನ್ ಮೀರಿಸಿದ ಬಾಲಕಿ!

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:50 IST
Last Updated 5 ಆಗಸ್ಟ್ 2013, 19:50 IST

ಲಂಡನ್ (ಪಿಟಿಐ): ಅಪ್ರತಿಮ ಬುದ್ಧಿ ಮತ್ತೆಯಿಂದ (ಐ.ಕ್ಯೂ) ಹೆಸರಾದ ಅಲ್ಬರ್ಟ್ ಐನ್‌ಸ್ಟೈನ್ ಮತ್ತು ಸ್ಟೀಫನ್ ಹಾಕಿಂಗ್ ಅವರಂಥ ವಿಜ್ಞಾನಿಗಳನ್ನು ಬುದ್ಧಿಮತ್ತೆಯಲ್ಲಿ ಬ್ರಿಟನ್‌ನ 11 ವರ್ಷ ದ ಶಾಲಾ ಬಾಲಕಿಯೊಬ್ಬಳು ಹಿಂದಿ ಕ್ಕುವ ಮೂಲಕ ಅಚ್ಚರಿ ಮೂಡಿ ಸಿದ್ದಾಳೆ.

ನಾರ್ಥ್‌ಪ್ಟನ್‌ನ ಸೆರ‌್ರಿಸ್ ಕುಕ್ಸ್‌ಆಮ್ಯಿ ಪಾರ್ನೆಲ್ ಎಂಬ ಆರನೇ ತರಗತಿ ವಿದ್ಯಾರ್ಥಿನಿ ಜುಲೈ 27ರಂದು ನಡೆದ `ಮೆನ್ಸಾ ಐ.ಕ್ಯೂ' (ಬುದ್ಧಿಮತ್ತೆ ಪ್ರಮಾಣ) ಪರೀಕ್ಷೆಯಲ್ಲಿ ಅತಿ ಹೆಚ್ಚು 162 ಅಂಕಗಳನ್ನು ಗಳಿಸುವ ಮೂಲಕ ಹೊಸ ಸಾಧನೆ ಮಾಡಿದ್ದಾಳೆ. 142 ಅಂಕಗಳನ್ನು ಗಳಿಸಿದ್ದ ತನ್ನ ತಂದೆ ಡೀನ್ ಅವರ ದಾಖಲೆ ಮುರಿಯುವ ಉದ್ದೇಶ ದಿಂದ ಪರೀಕ್ಷೆ ತೆಗೆದುಕೊಂಡಿದ್ದ ಬಾಲಕಿ 162 ಅಂಕಗಳ ಮೂಲಕ ಹೊಸ ದಾಖಲೆ ಬರೆದಿದ್ದಾಳೆ.

ಶತಮಾನದ ಶ್ರೇಷ್ಠ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೈನ್  ಬುದ್ಧಿ ಮತ್ತೆ ಪ್ರಮಾಣ ಪರೀಕ್ಷೆಗೆ ಒಳ ಗಾಗಿರಲಿಲ್ಲ. ಆದರೆ, ಐನ್‌ಸ್ಟೈನ್ ಮತ್ತು ಹಾಕಿಂಗ್ ಅವರ ಬುದ್ಧಿ ಮತ್ತೆಯ ಪ್ರಮಾಣ 160 ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಬಾಲಕಿ ಅವರಿ ಗಿಂತ ಹೆಚ್ಚಿನ  ಬುದ್ಧಿಮತ್ತೆ ಪ್ರದರ್ಶಿಸಿ ಮೂಲಕ ಇತಿಹಾಸ ನಿರ್ಮಿಸಿದ್ದಾಳೆ.

ಕನಿಷ್ಠ ಹತ್ತೂವರೆ ವರ್ಷ ಪೂರೈಸಿ ದವರಿಗೆ ಮಾತ್ರ ಈ ಪರೀಕ್ಷೆ ತೆಗೆದು ಕೊಳ್ಳಲು ಅವಕಾಶವಿದೆ. 11 ವರ್ಷಕ್ಕೆ ಕಾಲಿಟ್ಟಿರುವ  ಸೆರ‌್ರಿಸ್ ಈ ಸಾಧನೆಯ ಮೂಲಕ `ಮೆನ್ಸಾ ಬುದ್ಧಿ ವಂತರ ಗುಂಪಿ'ನ  (ಮೆನ್ಸಾ ಜೀನಿಯಸ್ ಗ್ರುಪ್) ಅತ್ಯಂತ ಕಿರಿಯ ವಯಸ್ಸಿನ ಸದಸ್ಯೆ ಎಂಬ ಅಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.