ADVERTISEMENT

ಒಬಾಮ ವಿರುದ್ಧ ಕೀಳುಮಟ್ಟದ ಜೋಕ್ ; ಕ್ಷಮೆ ಕೋರಿದ ನ್ಯಾಯಾಧೀಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST
ಒಬಾಮ ವಿರುದ್ಧ ಕೀಳುಮಟ್ಟದ ಜೋಕ್ ; ಕ್ಷಮೆ ಕೋರಿದ ನ್ಯಾಯಾಧೀಶ
ಒಬಾಮ ವಿರುದ್ಧ ಕೀಳುಮಟ್ಟದ ಜೋಕ್ ; ಕ್ಷಮೆ ಕೋರಿದ ನ್ಯಾಯಾಧೀಶ   

ಲಾಸ್ ಏಂಜಲೀಸ್ (ಪಿಟಿಐ): ಆಫ್ರಿಕಾ ಮೂಲದ ಅಮೆರಿಕದ ಪ್ರಜೆಗಳನ್ನು `ನಾಯಿ~ಗಳಿಗೆ ಹೋಲಿಸುವ ಮೂಲಕ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಉದ್ದೇಶಿಸಿ ಬರೆದಿದ್ದ ಕೀಳುಮಟ್ಟದ `ಜೋಕ್~ ಒಂದನ್ನು ಇ-ಮೇಲ್ ಕಳುಹಿಸಿದ್ದ ಜಿಲ್ಲಾ ಮುಖ್ಯ ನ್ಯಾಯಾಧೀಶರೊಬ್ಬರು ಕೊನೆಗೂ ತಮ್ಮ ತಪ್ಪಿಗಾಗಿ ಒಬಾಮ ಅವರ ಕ್ಷಮೆ ಕೋರಿದ್ದಾರೆ.

ಮೊಂಟಾನಾದ ಜಿಲ್ಲಾ ಮುಖ್ಯ ನ್ಯಾಯಾಧೀಶ ರಿಚರ್ಡ್ ಸೆಬುಲ್, ಕಚೇರಿಯಿಂದ ತಮ್ಮ ಏಳು ಆಪ್ತ ಮಿತ್ರರಿಗೆ ಈ ಜೋಕ್ ಅನ್ನು ಇ-ಮೇಲ್ ಮಾಡಿದ್ದರು.

ಅವರ ಮಿತ್ರನೊಬ್ಬ ರಿಚರ್ಡ್ ಅವರ  ಹೆಸರಿನ ಸಮೇತ ಇತರರಿಗೆ ಮಾತ್ರವಲ್ಲದೆ, `ಗ್ರೇಟ್ ಫಾಲ್ಸ್ ಟ್ರಿಬ್ಯೂನ್~ ಪತ್ರಿಕೆಗೂ ಆ ಜೋಕ್ ಅನ್ನು ಕಳುಹಿಸ್ದ್ದಿದ. ಇದು ವಿವಾದವನ್ನು ಹುಟ್ಟುಹಾಕಿತ್ತು.

`ಈ ವಿಷಯ ಬಹಿರಂಗ ಚರ್ಚೆಗೆ ಕಾರಣವಾಗುತ್ತದೆ ಮತ್ತು ಇಷ್ಟು ದೊಡ್ಡ ವಿವಾದಕ್ಕೆ ಗುರಿಯಾಗುತ್ತದೆ ಎಂಬ ಅರಿವು ನನಗೆ ಇರಲಿಲ್ಲ. ಇದೊಂದು ಅತ್ಯಂತ ಖಾಸಗಿ ವಿಷಯ. ಖಾಸಗಿ ಪತ್ರ ಬಹಿರಂಗವಾಗಿದ್ದು ವಿಷಾದನೀಯ~ ಎಂದು ರಿಚರ್ಡ್ ಸ್ಥಳೀಯ ಪತ್ರಿಕೆಗೆ    ನೀಡಿದ ಸಂದರ್ಶನದಲ್ಲಿ     ತಿಳಿಸಿದ್ದಾರೆ.

`ನಾನು ಜನಾಂಗವಾದಿಯೂ ಅಲ್ಲ; ಜನಾಂಗೀಯ ನಿಂದನೆ ಮಾಡುವ ಉದ್ದೇಶವೂ ಇರಲಿಲ್ಲ. ಜತೆಗೆ ನಮ್ಮ ಅಧ್ಯಕ್ಷ ಒಬಾಮ ಅವರ ಅಭಿಮಾನಿಯೂ ಅಲ್ಲ. ಅದರಲ್ಲಿ ಒಬಾಮ ವಿರೋಧಿ ಸಂದೇಶವಿದ್ದ ಕಾರಣ ಅವರನ್ನು ಕಿಚಾಯಿಸುವ ಉದ್ದೇಶದಿಂದ ಇ-ಮೇಲ್ ಕಳುಹಿಸಿದ್ದೆ ಅಷ್ಟೆ~ ಎಂದು ರಿಚರ್ಡ್ ಸ್ಪಷ್ಟನೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.