
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಅಮೆರಿಕ ಸರ್ಕಾರದ ವಿವಿಧ ಇಲಾಖೆಗಳ ಆಯಕಟ್ಟಿನ ಸ್ಥಾನಗಳಲ್ಲಿ 50ಕ್ಕೂ ಹೆಚ್ಚು ಭಾರತೀಯರನ್ನು ಅಧ್ಯಕ್ಷ ಬರಾಕ್ ಒಬಾಮ ನೇಮಕ ಮಾಡಿಕೊಂಡಿದ್ದು, ಇದು ದಾಖಲೆ ಸೃಷ್ಟಿಸಿದೆ.
ಅಮೆರಿಕದ ಜನಸಂಖ್ಯೆಯ ಶೇ 1ರಷ್ಟಿರುವ ಭಾರತೀಯ ಸಮುದಾಯದವರು ಒಬಾಮ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪ್ರಭಾವ ಬೀರುವಂತಹ ಹುದ್ದೆಗಳಲ್ಲಿ ಇದ್ದಾರೆ. ಭಾರತೀಯ ಮೂಲದ 31 ಲಕ್ಷದಷ್ಟು ಜನ ಅಮೆರಿಕದಲ್ಲಿ ನೆಲೆಸ್ದ್ದಿದಾರೆ. ಅಲ್ಲಿನ ವಿದೇಶಾಂಗ, ಹಣಕಾಸು, ರಕ್ಷಣಾ ಹಾಗೂ ವಾಣಿಜ್ಯ ಇಲಾಖೆಯ ಮಹತ್ವದ ಸ್ಥಾನಗಳಲ್ಲಿ ಭಾರತೀಯ ಮೂಲದವರೇ ಇದ್ದಾರೆ.
1987ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರೋನಾಲ್ಡ್ ರೇಗನ್ ಭಾರತೀಯ ಮೂಲದ ಜಾಯ್ ಚೆರಿಯನ್ ಅವರನ್ನು ಸಮಾನ ಉದ್ಯೋಗಾವಕಾಶ ಆಯೋಗದ ಸದಸ್ಯರಾಗಿ ಮೊದಲ ಬಾರಿಗೆ ನೇಮಕ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.