ADVERTISEMENT

ಒಮನ್: ಭಾರತ ಮೂಲದ ವಂಚಕಿ ಪರಾರಿ

ಒಮನ್: ಭಾರತ ಮೂಲದ ವಂಚಕಿ ಪರಾರಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ದುಬೈ (ಪಿಟಿಐ): ಭಾರತ ಮೂಲದ ಮಹಿಳೆಯೊಬ್ಬಳು ಒಮನ್‌ನಲ್ಲಿ ಭಾರತದ ಬಂಡವಾಳ ಹೂಡಿಕೆದಾರರಿಗೆ 1 ಕೋಟಿ ಡಾಲರ್ (ಸುಮಾರು ರೂ65 ಕೋಟಿ) ವಂಚಿಸಿ, ದೇಶದಿಂದ ಪರಾರಿಯಾಗಿದ್ದಾಳೆ.

ಮೇ ತಿಂಗಳಲ್ಲಿ ಆಕೆ ಒಮನ್‌ನಿಂದ ಪಲಾಯನ ಮಾಡಿದ್ದಾಳೆ. ಈಗ ಆಕೆ ಮಂಗಳೂರಿನಲ್ಲಿ ನೆಲೆಸಿದ್ದಾಳೆ ಎಂದು ಶಂಕಿಸಲಾಗಿದೆ ಎಂಬುದಾಗಿ ವಂಚನೆಗೆ ಒಳಗಾದವರು ಹೇಳಿದ್ದಾರೆ.

`ವಿವಿಧ ಯೋಜನೆಗಳ ಮುಖ್ಯಸ್ಥೆ ಎಂದು ಹೇಳಿಕೊಂಡಿದ್ದ ಮಹಿಳೆಯು, ನಕಲಿ ಸಹಿಗಳನ್ನೊಳಗೊಂಡ ಸಚಿವಾಲಯದ ದಾಖಲೆಗಳನ್ನು ತೋರಿಸಿದ್ದಳು. ಹೂಡಿದ ಬಂಡವಾಳಕ್ಕೆ ಬಡ್ಡಿ ನೀಡುವುದಾಗಿ ಆಮಿಷ ಒಡ್ಡಿದ್ದಳು. ಆಕೆಯನ್ನು ನಂಬಿ ಹಲವು ಹೂಡಿಕೆದಾರರು ದುಡ್ಡು ನೀಡಿದ್ದರು. ಆರಂಭದಲ್ಲಿ ಸರಿಯಾಗಿ ಬಡ್ಡಿ ನೀಡಿದ್ದಳು. ನಂತರದ ದಿನಗಳಲ್ಲಿ ಆಕೆ ಬಡ್ಡಿ ನೀಡಿರಲಿಲ್ಲ. ವಿಚಾರಿಸಲು ಯತ್ನಿಸಿದಾಗ, ಮಹಿಳೆ ದೇಶದಿಂದಲೇ ಪರಾರಿಯಾಗಿದ್ದಳು' ಎಂಬ ವಂಚನೆಗೆ ಒಳಗಾಗಿರುವ ಹೋಗಿರುವ ಹೂಡಿಕೆದಾರರ ಹೇಳಿಕೆಗಳನ್ನು ಉಲ್ಲೇಖಿಸಿ `ದ ಟೈಮ್ಸ ಆಫ್ ಒಮನ್' ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.