ADVERTISEMENT

ಕಡಿಮೆ ತೂಕದ ಮಕ್ಕಳ ಸಂಖ್ಯೆ ಭಾರತದಲ್ಲೇ ಅಧಿಕ

ಪಿಟಿಐ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಕಡಿಮೆ ತೂಕದ ಮಕ್ಕಳ ಸಂಖ್ಯೆ ಭಾರತದಲ್ಲೇ ಅಧಿಕ
ಕಡಿಮೆ ತೂಕದ ಮಕ್ಕಳ ಸಂಖ್ಯೆ ಭಾರತದಲ್ಲೇ ಅಧಿಕ   

ಲಂಡನ್: ಭಾರತದಲ್ಲಿ ಅತಿಹೆಚ್ಚು ಸಂಖ್ಯೆಯ ’ಕಡಿಮೆ ತೂಕದ ಮಕ್ಕಳು’ ಇದ್ದಾರೆ ಎಂದು  ಅಧ್ಯಯನವೊಂದು ಹೇಳಿದೆ. ಭಾರತದಲ್ಲಿ 2016ರಲ್ಲಿ ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿದ್ದ 9.70 ಕೋಟಿ ಮಕ್ಕಳು ಇದ್ದರು ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ಜಂಟಿಯಾಗಿ ಈ ಅಧ್ಯಯನ ನಡೆಸಿವೆ. ಕಳೆದ ನಾಲ್ಕು ದಶಕಗಳಲ್ಲಿ 19 ವರ್ಷದೊಳಗಿನ ಹದಿಹರೆಯದವರಲ್ಲಿ ಬೊಜ್ಜಿನ ಸಮಸ್ಯೆಯು ಹತ್ತುಪಟ್ಟು ಹೆಚ್ಚಿದೆ ಎಂದೂ ಹೇಳಿದೆ.

ಮಕ್ಕಳಿಗೆ ಆರೋಗ್ಯಯುತ, ಪೌಷ್ಠಿಕಾಂಶಯಯಕ್ತ ಆಹಾರವು ಮನೆ ಹಾಗೂ ಶಾಲೆಗಳಲ್ಲಿ ದೊರೆಯುವಂತಾಗಬೇಕು. ಮುಖ್ಯವಾಗಿ ಬಡ ಕುಟುಂಬಗಳು ಹಾಗೂ ಸಮುದಾಯಗಳಲ್ಲಿ ಇದು ಸಾಧ್ಯವಾಗಬೇಕು. ಆರೋಗ್ಯವನ್ನು ಕಡಿಸುವ ಆಹಾರಗಳ ನಿಯಂತ್ರಣಕ್ಕೆ ಕಾಯ್ದೆಗಳ ಅಗತ್ಯವಿದೆ.
– ಮಜಿದ್ ಎಜ್ಜಟಿ, ಇಂಪೀರಿಯಲ್ ಕಾಲೇಜ್‌ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT