ADVERTISEMENT

ಕಣ್ಣ ನೋಟದಲ್ಲಿಲ್ಲ ಸಾಚಾತನ..!

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST

ಲಂಡನ್ (ಪಿಟಿಐ): `ವ್ಯಕ್ತಿಯ ಕಣ್ಣಿನ ಚಲನೆಗೂ ಹಾಗೂ ಆತ/ಆಕೆ ಆಡುವ ಮಾತಿನ ಸಾಚಾತನಕ್ಕೂ ಸಂಬಂಧವಿದೆ~ ಎನ್ನುತ್ತದೆ ಮನಃಶಾಸ್ತ್ರ. ವಂಚಕರನ್ನು ಪತ್ತೆಹಚ್ಚಲು ಸರ್ಕಾರಿ ಇಲಾಖೆಗಳಲ್ಲಿ ಕೂಡ ಈ ತಂತ್ರ ಅನುಸರಿಸಲಾಗುತ್ತದೆ. ಆದರೆ ಈ ತರ್ಕವನ್ನೇ ಬುಡಮೇಲು ಮಾಡುವ- ಕಣ್ಣಿನ ಚಲನೆಗೂ ವ್ಯಕ್ತಿಯ ಅಸಲಿತನಕ್ಕೂ ಸಂಬಂಧವೇ ಇಲ್ಲ- ಎನ್ನುವ ಹೊಸ ವಾದವನ್ನು ಸಂಶೋಧಕರು ಇದೀಗ ಪ್ರತಿಪಾದಿಸಿದ್ದಾರೆ.

ವ್ಯಕ್ತಿ  ಮಾತನಾಡುವಾಗ ತನ್ನ ಬಲಭಾಗದತ್ತ ದೃಷ್ಟಿ ಹಾಯಿಸಿ ಮಾತನಾಡಿದರೆ ಅದು ಸುಳ್ಳಿನ ಸೂಚಕ. ಎಡಭಾಗಕ್ಕೆ ನೋಟ ಹಾಯಿಸಿ ಮಾತನಾಡಿದರೆ, ಅದು ನೆನಪು ಆಧರಿಸಿ ಹೇಳುತ್ತಿರುವ ಮಾತಾಗಿರುವ ಸಾಧ್ಯತೆ ಹೆಚ್ಚು ಎಂದೇ ಮನಃಶಾಸ್ತ್ರಜ್ಞರು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದಾರೆ. ಆದರೆ, ಕಣ್ಣಿನ ಚಲನೆಯು ವ್ಯಕ್ತಿಯ ಮಾತಿನ ಸಾಚಾತನದ ಬಗ್ಗೆ ಯಾವ ಸುಳಿವನ್ನೂ ನೀಡುವುದಿಲ್ಲವೆಂಬುದು ವಿಡಿಯೊ ಪರೀಕ್ಷೆಗಳಿಂದ ದೃಢಪಟ್ಟಿದೆ ಎನ್ನುತ್ತಾರೆ ಎಡಿನ್‌ಬರೊ ವಿವಿಯ ಡಾ. ಕ್ಯಾರೊಲಿನ್.

ಮೊದಲ ಗುಂಪಿನಲ್ಲಿ ಕೆಲವರನ್ನು ಆಯ್ದು, ಅವರ ಮಾತು ಹಾಗೂ ಕಣ್ಣ ಚಲನೆಯನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಯಿತು. ನಂತರ ಎರಡನೇ ಗುಂಪಿನವರಿಗೆ, ಆ ದೃಶ್ಯಗಳ ಕಣ್ಣ ಚಲನೆಗಳನ್ನು ಆಧರಿಸಿ, ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಪತ್ತೆ ಹಚ್ಚಲು ಸೂಚಿಸಲಾಯಿತು. ಇದರಿಂದ ಬಂದ ಫಲಿತಾಂಶದಿಂದ, ಮಾತಿನ ಸಾಚಾತನಕ್ಕೂ, ಕಣ್ಣ ಚಲನೆಗೂ ಯಾವ ಸಂಬಂಧವೂ ಇಲ್ಲವೆಂಬುದು ದೃಢಪಟ್ಟಿದೆ ಎಂಬುದು ಕ್ಯಾರೊಲಿನ್ ವಿವರಣೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.