ADVERTISEMENT

ಕನ್ನಡಿಗ ವಿವೇಕ್‌ ಮೂರ್ತಿಗೆ ವಲಸಿಗ ಪ್ರಶಸ್ತಿ

ಪಿಟಿಐ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ಶಂತನು ನಾರಾಯಣ್‌, ವಿವೇಕ್‌ ಮೂರ್ತಿ
ಶಂತನು ನಾರಾಯಣ್‌, ವಿವೇಕ್‌ ಮೂರ್ತಿ   

ನ್ಯೂಯಾರ್ಕ್‌:  ಅಮೆರಿಕದ ಸಾಂಸ್ಕೃತಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಿದ  ಭಾರತೀಯ ಸಂಜಾತ  ಅಡೋಬ್‌ ಸಂಸ್ಥೆಯ ಮುಖ್ಯಸ್ಥ ಶಂತನು ನಾರಾಯಣ್‌, ಕರ್ನಾಟಕ ಮೂಲದ ಅಮೆರಿಕದ ಖ್ಯಾತ ಸರ್ಜನ್‌ ವಿವೇಕ್‌ ಮೂರ್ತಿ ಸೇರಿದಂತೆ 38 ಮಂದಿ ಈ ವರ್ಷದ ‘ಖ್ಯಾತ ವಲಸಿಗ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಜುಲೈ 4ರಂದು ನಡೆಯುವ ಅಮೆರಿಕ ಸ್ವಾತಂತ್ರ್ಯ ದಿನದಂದು ಭಾರತದ ಇಬ್ಬರಿಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಬ್ರಿಟನ್‌ನಲ್ಲಿ ಜನಿಸಿದ 39 ವರ್ಷದ ವಿವೇಕ್‌ ಮೂರ್ತಿ ಹಾರ್ವರ್ಡ್‌ ಹಾಗೂ  ಯಾಲೆ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದಿದ್ದಾರೆ. ಈ ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಇವರನ್ನು ಅಮೆರಿಕದ ಸರ್ಜನ್‌  ಜನರಲ್‌ ಹುದ್ದೆಗೆ ಆಯ್ಕೆ ಮಾಡಿದ್ದರು. ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಚಿಕ್ಕ ವಯಸ್ಸಿಗೆ ಈ ಹುದ್ದೆ ಅಲಂಕರಿಸಿದ್ದ ಕೀರ್ತಿಗೆ  ವಿವೇಕ್‌ ಭಾಜನರಾಗಿದ್ದರು.

ADVERTISEMENT

ಟ್ರಂಪ್‌ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ ಏಪ್ರಿಲ್‌ನಲ್ಲಿ ವಿವೇಕ್‌ ಅವರನ್ನು ಹುದ್ದೆಯಿಂದ ವಜಾಗೊಳಿಸ ಲಾಗಿತ್ತು. ಹೈದರಬಾದ್‌ ಮೂಲದ 54 ವರ್ಷದ ನಾರಾಯಣ್‌, ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಪದವಿ, ಕಂಪ್ಯೂಟರ್‌ ಸೈನ್ಸ್‌ನಲ್ಲಿ ಸ್ನಾತಕೋತರ ಹಾಗೂ ಯುಸಿ ಬರ್‌ಕ್ಲೆಯಿಂದ ಎಂಬಿಎ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.