ADVERTISEMENT

ಕಳ್ಳತನ: ತಪ್ಪೊಪ್ಪಿಗೆಗೆ ನಟಿ ಲಿಂಡ್ಸೇ ನಕಾರ.

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ಲಾಸ್ ಏಂಜಲೀಸ್ (ಪಿಟಿಐ): ಸುಮಾರು 2500 ಅಮೆರಿಕನ್ ಡಾಲರ್ ಮೌಲ್ಯದ ನೆಕ್‌ಲೇಸ್ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಹಾಲಿವುಡ್ ನಟಿ ಲಿಂಡ್ಸೇ ಲೋಹನ್ (24) ತಪ್ಪೊಪ್ಪಿಕೊಳ್ಳಲು ನ್ಯಾಯಾಧೀಶರು ನೀಡಿದ ಸಲಹೆಯನ್ನು ತಿರಸ್ಕರಿಸಿ, ವಿಚಾರಣೆ ಎದುರಿಸಲು ನಿರ್ಧರಿಸಿದ್ದಾರೆ.

ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳುವಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಕೇತ್ ಶ್ವಾರ್ಟ್ಜ್ ನೀಡಿದ ಸಲಹೆಯನ್ನು ಲೋಹನ್ ತಿರಸ್ಕರಿಸಿರುವುದಾಗಿ ಅವರ ಅಟಾರ್ನಿ ಶಾನ್ ಹಾಲಿ ತಿಳಿಸಿದ್ದಾರೆ. ತಪ್ಪೊಪ್ಪಿಕೊಳ್ಳದಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದೂ ನ್ಯಾಯಾಧೀಶರು ಎಚ್ಚರಿಸಿದ್ದರು. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ನಟಿ ಲಿಂಡ್ಸೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.