ADVERTISEMENT

ಕಾಫಿಯಲ್ಲಿ ಕಾಣಿಸಿಕೊಂಡವು ಜಿರಳೆ ಕಾಲುಗಳು: ಗ್ರಾಹಕರ ಕ್ಷಮೆ ಕೋರಿದ ಮೆಕ್‌ಡೊನಾಲ್ಡ್‌

ಏಜೆನ್ಸೀಸ್
Published 20 ಅಕ್ಟೋಬರ್ 2017, 11:49 IST
Last Updated 20 ಅಕ್ಟೋಬರ್ 2017, 11:49 IST
ಕಾಫಿಯಲ್ಲಿ ಕಾಣಿಸಿಕೊಂಡವು ಜಿರಳೆ ಕಾಲುಗಳು: ಗ್ರಾಹಕರ ಕ್ಷಮೆ ಕೋರಿದ ಮೆಕ್‌ಡೊನಾಲ್ಡ್‌
ಕಾಫಿಯಲ್ಲಿ ಕಾಣಿಸಿಕೊಂಡವು ಜಿರಳೆ ಕಾಲುಗಳು: ಗ್ರಾಹಕರ ಕ್ಷಮೆ ಕೋರಿದ ಮೆಕ್‌ಡೊನಾಲ್ಡ್‌   

ಬ್ಯಾಂಕಾಕ್‌: ಇಲ್ಲಿನ ಮೆಕ್‌ಡೊನಾಲ್ಡ್‌ ಫಾಸ್ಟ್‌ಪುಡ್‌ ರೆಸ್ಟೋರೆಂಟ್‌ನಲ್ಲಿ ಕಾಫಿ ಸೇವಿಸಲು ಹೋದ ಗ್ರಾಹಕರಿಗೆ ಕಾಫಿಯಲ್ಲಿ ಜಿರಳೆಯ ಕಾಲುಗಳಿರುವುದು ಕಾಣಿಸಿಕೊಂಡಿವೆ. ಈ ಬಗ್ಗೆ ದೂರುಗಳು ಕೇಳಿಬಂದ ನಂತರ ಕಂಪೆನಿ ಗ್ರಾಹಕರ ಕ್ಷಮೆ ಕೋರಿದೆ.

ರೆಸ್ಟೋರೆಂಟ್‌ಗೆ ಕಾಫಿ ಸೇವಿಸಲು ಹೋದ ನಾಸ್ಟೋಲಿಕ್‌ ಈಕ್‌ ಎನ್ನುವವರು ಕಾಫಿಯಲ್ಲಿ ಜಿರಳೆಯ ಕಾಲುಗಳಿರುವುದನ್ನು ಗಮನಿಸಿ‌, ಸಿಬ್ಬಂದಿಗೆ ದೂರು ನೀಡಿ ಬೇರೆ ಕಾಫಿ ನೀಡುವಂತೆ ಹೇಳಿದ್ದಾರೆ. ಆದರೆ, ಸಿಬ್ಬಂದಿ ಕೊಟ್ಟ ಮತ್ತೊಂದು ಕಪ್‌ ಕಾಫಿಯಲ್ಲಿ ಮೊದಲಿದ್ದುದಕ್ಕಿಂತಲೂ ಹೆಚ್ಚು ಕಾಲುಗಳು ಕಾಣಿಸಿವೆ.

ಈ ವೇಳೆ ತೆಗೆಯಲಾದ ಚಿತ್ರ ಹಾಗೂ ವಿವರವನ್ನು ನಾಸ್ಟೋಲಿಕ್‌ ತಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಗುರುವಾರ ಪೋಸ್ಟ್‌ಮಾಡಿದ್ದಾರೆ. ಇದನ್ನು ಒಂದೇ ದಿನದಲ್ಲಿ 1,700ಕ್ಕೂ ಹೆಚ್ಚು ಜನರು ಹಂಚಿಕೊಂಡಿದ್ದು, 14,000 ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಘಟನೆಯ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡಿರುವ ಕಂಪೆನಿ ಗ್ರಾಹಕರ ಕ್ಷಮೆ ಕೋರಿದ್ದು, ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದಾಗಿ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.