ADVERTISEMENT

ಕಾಲ್ತುಳಿತಕ್ಕೆ ಹತ್ತು ಮಹಿಳೆಯರು ಬಲಿ

ಪಿಟಿಐ
Published 14 ಮೇ 2018, 19:30 IST
Last Updated 14 ಮೇ 2018, 19:30 IST

ಢಾಕಾ: ಇಫ್ತಾರ್‌ ಕೂಟದಲ್ಲಿ ಅಗತ್ಯ ವಸ್ತುಗಳನ್ನು ಪಡೆಯುವಾಗ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಹತ್ತು ಮಹಿಳೆಯರು ಸಾವಿಗೀಡಾಗಿದ್ದರೆ, ಹಲವರು ಗಾಯಗೊಂಡಿದ್ದಾರೆ.

ಬಾಂಗ್ಲಾದೇಶದ ಚಿತ್ತಗಾಂಗ್‌ ಜಿಲ್ಲೆಯ ಸತ್ಕಾನಿಯಾ ಉಪಝಿಲಾ ಗ್ರಾಮದ ಆಟದ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಇಫ್ತಾರ್‌ಕೂಟದಲ್ಲಿ 35 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಉಕ್ಕು ಕಾರ್ಖಾನೆ ವತಿಯಿಂದ ಸೀರೆ ಹಾಗೂ ನಗದು ವಿತರಿಸುವಾಗ ಈ ಘಟನೆ ನಡೆದಿದೆ ಎಂದು ಚಿತ್ತಗಾಂಗ್‌ ಜಿಲ್ಲಾಧಿಕಾರಿ ಇಲಿಯಸ್‌ ಹೊಸೈನ್‌ ತಿಳಿಸಿದ್ದಾರೆ.

‘ಕಾಲ್ತುಳಿತ ಮಾತ್ರವಲ್ಲದೆ, ಹೆಚ್ಚಾಗಿದ್ದ ಬಿಸಿಲಿನ ತಾಪವೂ ಮಹಿಳೆಯರ ಸಾವಿಗೆ ಕಾರಣವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಕರಣದ ಕುರಿತು ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.