ADVERTISEMENT

ಕಿಮ್‌ ಜಾಂಗ್‌ ಭೇಟಿಯಾಗಲು ಡೊನಾಲ್ಡ್‌ ಟ್ರಂಪ್‌ ಒ‍ಪ್ಪಿಗೆ

ಪಿಟಿಐ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಕಿಮ್‌ ಜಾಂಗ್‌ ಉನ್‌ ಹಾಗೂ ಡೊನಾಲ್ಡ್‌ ಟ್ರಂಪ್‌
ಕಿಮ್‌ ಜಾಂಗ್‌ ಉನ್‌ ಹಾಗೂ ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರನ್ನು ಭೇಟಿಯಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒ‍ಪ್ಪಿಗೆ ಸೂಚಿಸಿದ್ದಾರೆ.

‘ಈ ಭೇಟಿ ಬರುವ ಮೇ ತಿಂಗಳಲ್ಲಿ ನಡೆಯಲಿದೆ’ ಎಂದು ದಕ್ಷಿಣ ಕೊರಿಯಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟ್ರಂಪ್‌ ಅವರು ಕಿಮ್‌ ಅವರನ್ನು ಎಲ್ಲಿ ಭೇಟಿಯಾಗುತ್ತಾರೆ ಎಂಬುದನ್ನು ಖಚಿತಪಡಿಸಿಲ್ಲ.

ದಕ್ಷಿಣ ಕೊರಿಯಾದ ಭದ್ರತಾ ಸಲಹೆಗಾರ ಚುಂಗ್‌–ಎಯಿ–ಯಾಂಗ್‌ ಅವರ ನೇತೃತ್ವದ ನಿಯೋಗವು ಉತ್ತರ ಕೊರಿಯಾದ ನಾಯಕರ ಜೊತೆಗೆ ಇತ್ತೀಚಿಗೆ ಮಾತುಕತೆ ನಡೆಸಿತ್ತು. ಇದೇ ನಿಯೋಗವು ಶುಕ್ರವಾರ ಬೆಳಿಗ್ಗೆ ಟ್ರಂಪ್‌ ಹಾಗೂ ರಾಷ್ಟ್ರೀಯ ಭದ್ರತಾ ತಂಡಕ್ಕೆ ಈ ಬಗ್ಗೆ ಮಾಹಿತಿ ನೀಡಿ, ಉಭಯ ನಾಯಕರ ಭೇಟಿಯನ್ನು ಅಧಿಕೃತಗೊಳಿಸಿದೆ.

ADVERTISEMENT

ಹಾಂಗ್‌ಕಾಂಗ್‌ ಷೇರು ಮಾರುಕಟ್ಟೆ ಜಿಗಿತ: ಟ್ರಂಪ್‌–ಜಾಂಗ್‌ ಭೇಟಿಯ ಸುದ್ದಿ ಹೊರಬಿದ್ದ ಬೆನ್ನಲ್ಲೇ ಹಾಂಗ್‌ಕಾಂಗ್‌ ಷೇರು ಮಾರುಕಟ್ಟೆ ಭಾರಿ ಏರಿಕೆ ದಾಖಲಿಸಿತು. ಒಂದೇ ದಿನ 203 ಅಂಶಗಳ ಏರಿಕೆ ದಾಖಲಿಸಿ, ದಿನದ ಅಂತ್ಯಕ್ಕೆ 30,858 ಹಾಂಗ್‌ಸೆಂಗ್‌ ಸೂಚ್ಯಂಕ ವಹಿವಾಟು ಕೊನೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.