
ಪ್ರಜಾವಾಣಿ ವಾರ್ತೆಮಾಸ್ಕೊ (ಐಎಎನ್‌ಎಸ್): ಅಪರಾಧ ತನಿಖಾಧಿಕಾರಿಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ರಷ್ಯಾದ ಮೇಯರ್ ಒಬ್ಬರನ್ನು ಭಾನುವಾರ ಬಂಧಿಸಲಾಗಿದೆ.
ದಗೆಸ್ತಾನ್ ರಿಪಬ್ಲಿಕ್‌ನ ರಾಜಧಾನಿ ಮಕಾಚಕ್ಲಾದ ಮೇಯರ್ ಸೆಡ್ ಅಮಿರೊ ಬಂಧಿತರು.
ಆರೋಪಿ ಮೇಯರ್ 2011ರಲ್ಲಿ ಅಪರಾಧ ತನಿಖಾಧಿಕಾರಿ ಆರ್ಸೆನ್ ಗಡ್ಜಿಬೆಕೊವ್ ಅವರ ಕೊಲೆಗೆ ಸಂಚು ರೂಪಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ 10 ಶಂಕಿತರನ್ನು ಬಂಧಿಸಲಾಗಿದೆ ಎಂದು ತನಿಖಾ ಸಮಿತಿ ವಕ್ತಾರ ವ್ಲಾಡಿಮೀರ್ ಮಾರ್ಕಿನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.