ADVERTISEMENT

ಕ್ಷಿಪಣಿ: ಅಪಾಯಕಾರಿ, ಬಳಕೆ ಕಷ್ಟಸಾಧ್ಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಪ್ಯಾರಿಸ್ (ಎಎಫ್‌ಪಿ): ಲಿಬಿಯಾದಲ್ಲಿ ಲೂಟಿ ಮಾಡಲಾದ ಭೂಮಿಯಿಂದ ಗಗನಕ್ಕೆ ಚಿಮ್ಮುವಂತಹ ಕ್ಷಿಪಣಿಗಳು ಅಪಾಯಕಾರಿಯಾದರೂ, ಅವುಗಳನ್ನು ಬಳಸುವುದು ಕಷ್ಟಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಿಬಿಯಾದಲ್ಲಿ ನಡೆದ ರಾಜಕೀಯ ಗಲಭೆ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊಳ್ಳೆ ಹೊಡೆಯಲಾದ ಈ ಕ್ಷಿಪಣಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಇವುಗಳನ್ನು ಆಫ್ರಿಕ ಸಹರ ವಲಯದ ಉಗ್ರರ ಗುಂಪುಗಳು ಕೊಂಡಿರುವ ಸಾಧ್ಯತೆ ಇದೆ. ಆದರೆ ಈ ಉಗ್ರರಿಗೆ ಅವುಗಳ ಬಳಕೆ ವಿಧಾನ ತಿಳಿದಿಲ್ಲ ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಸೋವಿಯತ್ ರಷ್ಯ ತಯಾರಿಸಿದ `ಎಸ್‌ಎ- 7~ ಕ್ಷಿಪಣಿಗಳು ಕಡಿಮೆ ಎತ್ತರಕ್ಕೆ ಜಿಗಿಯುವಂಥದ್ದಾದರೂ ಭಾರಿ ಸ್ಫೋಟ ಮಾಡಿ ಅನೇಕರನ್ನು ಸಾಯಿಸುವ ಸಾಮರ್ಥ್ಯಹೊಂದಿವೆ. ಇವುಗಳನ್ನು ಮಾನವರು ಹೊತ್ತೊಯ್ಯಬಹುದು. ಇಂತಹ ಕ್ಷಿಪಣಿಗಳು ಅಲ್‌ಖೈದಾ ಸಂಘಟನೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಉಗ್ರರ ಗುಂಪು ಕೈಗೆ ಸಿಕ್ಕಿರುವುದು ಆತಂಕಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.