ADVERTISEMENT

ಖಭೌತಶಾಸ್ತ್ರಜ್ಞ ಸುಬ್ರಹ್ಮಣ್ಯನ್‌ ಚಂದ್ರಶೇಖರ್‌ 107ನೇ ಜನ್ಮದಿನ: ಗೂಗಲ್‌ ಡೂಡಲ್‌ ಗೌರವ

ನಕ್ಷತ್ರಗಳ ವಿಕಾಸ ಕುರಿತ ಸಿದ್ಧಾಂತಕ್ಕೆ ನೊಬೆಲ್‌

ಏಜೆನ್ಸೀಸ್
Published 19 ಅಕ್ಟೋಬರ್ 2017, 12:01 IST
Last Updated 19 ಅಕ್ಟೋಬರ್ 2017, 12:01 IST
ಖಭೌತಶಾಸ್ತ್ರಜ್ಞ ಸುಬ್ರಹ್ಮಣ್ಯನ್‌ ಚಂದ್ರಶೇಖರ್‌ 107ನೇ ಜನ್ಮದಿನ: ಗೂಗಲ್‌ ಡೂಡಲ್‌ ಗೌರವ
ಖಭೌತಶಾಸ್ತ್ರಜ್ಞ ಸುಬ್ರಹ್ಮಣ್ಯನ್‌ ಚಂದ್ರಶೇಖರ್‌ 107ನೇ ಜನ್ಮದಿನ: ಗೂಗಲ್‌ ಡೂಡಲ್‌ ಗೌರವ   

ಬೆಂಗಳೂರು: ಖಭೌತಶಾಸ್ತ್ರಜ್ಞ ಸುಬ್ರಹ್ಮಣ್ಯನ್‌ ಚಂದ್ರಶೇಖರ್‌ ಅವರ 107ನೇ ಜನ್ಮದಿನವನ್ನು ಗುರುವಾರ ಗೂಗಲ್‌ ಡೂಡಲ್‌ ಪ್ರಕಟಿಸುವ ಮೂಲಕ ಆಚರಿಸಿದೆ.

ಭಾರತೀಯ ಮೂಲದ ಅಮೆರಿಕ ಖಭೌತಶಾಸ್ತ್ರಜ್ಞ ಎಸ್‌.ಚಂದ್ರಶೇಖರ್‌ ಮಂಡಿಸಿದ ನಕ್ಷತ್ರಗಳ ವಿಕಾಸದ ಕುರಿತಾಗಿ ಸಿದ್ಧಾಂತಕ್ಕೆ 1983ರಲ್ಲಿ ನೊಬೆಲ್‌ ಪ್ರಶಸ್ತಿ ಸಂದಿದೆ.

ಅವರ ವೈಟ್‌ ದ್ವಾರ್ಫ್‌ ಸಿದ್ಧಾಂತ, ತನ್ನೊಳಗಿನ ಇಂಧನ ಕಳೆದುಕೊಳ್ಳುವ ನಕ್ಷತ್ರಗಳು ಒಳಗಿನ ಗುರುತ್ವದಲ್ಲಿ ಮುಳುಗಿ ಅಂತ್ಯಗೊಳ್ಳುವುದು, ಸೂಪರ್‌ನೋವಾ ಸ್ಫೋಟ ಕುರಿತಾದ ಸಂಶೋಧನೆಗಳು ತಾರಾಲೋಕದಲ್ಲಿ ಅಧ್ಯಯನವನ್ನು ವಿಸ್ತಾರಗೊಳಿಸಿದೆ.

ADVERTISEMENT

ಮದ್ರಾಸ್‌ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ನಡೆಸಿದ ಅವರು 1936ರಲ್ಲಿ ಅಮೆರಿಕದ ಕೇಂಬ್ರಿಡ್ಜ್‌ಗೆ ಹೆಚ್ಚಿನ ಅಧ್ಯಯನಕ್ಕೆ ತೆರಳಿ ಖಗೋಳ ವಿಸ್ಮಯಗಳನ್ನು ವೈಜ್ಞಾನಿಕವಾಗಿ ವಿವರಿಸುವ ಹಾಗೂ ಕಂಡುಕೊಳ್ಳುವಲ್ಲಿ ಮಗ್ನರಾದರು.

ಸೂರ್ಯನ 1.44ಕ್ಕಿಂತ ಹೆಚ್ಚು ದ್ರಶ್ಯರಾಶಿ ಹೊಂದಿರುವ ನಕ್ಷತ್ರ ಕಪ್ಪುಕುಳಿ(ಬ್ಲಾಕ್‌ ಹೋಲ್‌) ಎನಿಸುತ್ತದೆ ಎನ್ನುವ 1931ರ ಅವರ ಅಧ್ಯಯನ ನಂತರದ ದಿನಗಳಲ್ಲಿ ಚಂದ್ರಶೇಖರ್‌ ಮಿತಿ(ಚಂದ್ರಶೇಖರ್‌ ಲಿಮಿಟ್‌) ಎಂದೇ ಬಳಕೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.