ADVERTISEMENT

ಗಡಿಯಲ್ಲಿ ನೆಲೆ ಭದ್ರ ಮಾಡಿಕೊಳ್ಳಿ: ಕ್ಸಿ ಜಿನ್‌ಪಿಂಗ್

ಪಿಟಿಐ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST

ಬೀಜಿಂಗ್ಐ: ಚೀನಾದ ಗಡಿ ರಕ್ಷಣೆಗಾಗಿ ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಟಿಬೆಟ್‌ ಪ್ರದೇಶದಲ್ಲಿ ನೆಲೆಯನ್ನು ಭದ್ರಪಡಿಸಿಕೊಳ್ಳಿ ಮತ್ತು ತಮ್ಮ ಹಳ್ಳಿಗಳ ಅಭಿವೃದ್ಧಿಯತ್ತ ಗಮನ ಹರಿಸಿ ಎಂದು ದನಗಾಹಿಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ.

‘ಗಡಿಯಲ್ಲಿ ಶಾಂತಿ ನೆಲೆಸದೇ, ಲಕ್ಷಾಂತರ ಕುಟುಂಬಗಳಿಗೆ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಟಿಬೆಟ್‌ನ ಲ್ಹುಂಜೆ ಪ್ರಾಂತದ ದನಗಾಹಿಗಳಿಗೆ ಅಧ್ಯಕ್ಷರು ಭಾನುವಾರ ಕರೆ ನಿಡಿದ್ದಾರೆ’ ಎಂದು ಸರ್ಕಾರದ ಅಧಿಕೃತ ಮಾಧ್ಯಮ ವರದಿ ಮಾಡಿದೆ.

ಜೋಯಿಗರ್ ಮತ್ತು ಯಾಂಗ್‌ಜೊಮ್ ಎಂಬ ಇಬ್ಬರು ಹುಡುಗಿಯರು ಜಿನ್‌ಪಿಂಗ್ ಅವರಿಗೆ ಪತ್ರ ಬರೆದು, ಹಲವು ವರ್ಷಗಳಿಂದ ಗಡಿ ರಕ್ಷಣೆ ಮತ್ತು ಗ್ರಾಮದ ಅಭಿವೃದ್ಧಿಯ ತಮ್ಮ ಅನುಭವ ಹಂಚಿಕೊಂಡಿದ್ದರು. ಇದಕ್ಕಾಗಿ ಜಿನ್‌ಪಿಂಗ್ ಅವರು ಆ ಭಾಗದ ಜನರಿಗೆ ಧನ್ಯವಾದ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.