ಬೀಜಿಂಗ್ (ಪಿಟಿಐ): ಚೀನಾದ ಹನ್ನನ್ ಪ್ರಾಂತ್ಯದಲ್ಲಿರುವ ಸರ್ಕಾರಿ ಒಡೆತನದ ಕಲ್ಲಿದ್ದಲು ಗಣಿಯಲ್ಲಿ ಶನಿವಾರ ಸಂಜೆ ಅನಿಲ ಸ್ಫೋಟ ಸಂಭವಿಸಿ, 29 ಕಾರ್ಮಿಕರು ಮೃತಪಟ್ಟಿದ್ದಾರೆ.
ಗಣಿಯಲ್ಲಿ 35 ಮಂದಿ ಕೆಲಸ ನಿರ್ವಹಿಸುತ್ತಿದ್ದರು. 6 ಮಂದಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
40 ವರ್ಷದಷ್ಟು ಹಳೆಯದಾದ ಈ ಗಣಿಯಲ್ಲಿ, ಕಳೆದ ಮೂರು ದಿನಗಳ ಹಿಂದೆಯೂ ಅನಿಲ ಸ್ಫೋಟ ಸಂಭವಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.