ADVERTISEMENT

ಗುರ್ಮಿತ್‌ಗೆ ಆಹ್ವಾನ ನೀಡಿದ ವಿಶ್ವಸಂಸ್ಥೆ!

ಏಜೆನ್ಸೀಸ್
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

ವಿಶ್ವಸಂಸ್ಥೆ: ಮುಂದಿನ ತಿಂಗಳು ನಡೆಯುವ ವಿಶ್ವ ಶೌಚಾಲಯ ದಿನಕ್ಕೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ಮತ್ತು ಹನಿಪ್ರೀತ್‌ ಅವರನ್ನು ವಿಶ್ವಸಂಸ್ಥೆ  ಆಹ್ವಾನಿಸಿ ಟೀಕೆಗೊಳಗಾದ ಪ್ರಸಂಗ ಬುಧವಾರ ನಡೆಯಿತು.

ವಿಶ್ವ ಶೌಚಾಲಯ ದಿನದಂದು ನಡೆಯುವ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹನಿಪ್ರೀತ್ ಮತ್ತು ಗುರ್ಮೀತ್ ರಾಮ್ ರಹೀಂ ಕೈ ಜೋಡಿಸುವಂತೆ ಕೋರಿ ಟ್ವೀಟ್‌ ಮಾಡಲಾಗಿತ್ತು.

ವಿಶ್ವ ಸಂಸ್ಥೆಯ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಆಗುತ್ತಿದ್ದಂತೆ ಹಲವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇದು ದಿನದ ಬಹುದೊಡ್ಡ ಜೋಕ್ ಎಂದು ವ್ಯಂಗ್ಯವಾಡಿದ್ದಾರೆ.
ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ವಿಶ್ವಸಂಸ್ಥೆ ಈ ಟ್ವೀಟ್‌ ಅನ್ನು ತೆಗೆದು ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT