ADVERTISEMENT

ಗೂಗಲ್‌ಗೆ 2.25 ಕೋಟಿ ಡಾಲರ್ ದಂಡ?

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ನ್ಯೂಯಾರ್ಕ್ (ಪಿಟಿಐ): ಆ್ಯಪಲ್ ಸಂಸ್ಥೆಯ ಲಕ್ಷಾಂತರ ಬಳಕೆದಾರರ `ವೈಯಕ್ತಿಕ ಸುರಕ್ಷತಾ ಆಯ್ಕೆ~ ವ್ಯವಸ್ಥೆಯನ್ನು (ಪ್ರೈವಸಿ ಸೆಟ್ಟಿಂಗ್) ರಹಸ್ಯವಾಗಿ ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್‌ನೆಟ್ ದೈತ್ಯ ಗೂಗಲ್ ಸಂಸ್ಥೆ 2.25 ಕೋಟಿ ಡಾಲರ್ (ಸುಮಾರು ರೂ123 ಕೋಟಿ) ದಂಡ ತೆರುವ ಸಾಧ್ಯತೆ ಇದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಈ ಪ್ರಕರಣವನ್ನು ಇತ್ಯರ್ಥ ಪಡಿಸುವ ಸಂಬಂಧ, ಪ್ರಕರಣದ ತನಿಖೆ ನಡೆಸುತ್ತಿರುವ ಅಮೆರಿಕದ ಸಂಯುಕ್ತ ವ್ಯಾಪಾರ ಆಯೋಗ (ಎಫ್‌ಟಿಸಿ) ಮತ್ತು ಗೂಗಲ್ ನಡುವೆ ಒಪ್ಪಂದವೊಂದು ಏರ್ಪಟ್ಟಿದೆ. ಅದರ ಅನ್ವಯ ಗೂಗಲ್, 2.25 ಕೋಟಿ ಡಾಲರ್ ಪಾವತಿ ಮಾಡಲಿದೆ ಎಂದು ಮೂಲವನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಅಮೆರಿಕದ ಸಂಯುಕ್ತ ವ್ಯಾಪಾರ ಆಯೋಗವು ಸಂಸ್ಥೆಯೊಂದರ ಮೇಲೆ ವಿಧಿಸಲಿರುವ ಗರಿಷ್ಠ ಮೊತ್ತದ ದಂಡ ಇದಾಗಲಿದೆ ಎಂದೂ ವರದಿ ಹೇಳಿದೆ.

ಆದರೆ, ಈ  ಬಗ್ಗೆ ಪ್ರತಿಕ್ರಿಯಿಸಲು ಎಫ್‌ಟಿಸಿ ನಿರಾಕರಿಸಿದೆ ಎಂದು ಪತ್ರಿಕೆ ತಿಳಿಸಿದೆ.

ಗೂಗಲ್ ಸಂಸ್ಥೆಯು ವಿಶೇಷವಾದ ಕೋಡ್‌ನ್ನು ಬಳಸಿ ಆ್ಯಪಲ್ ಕಂಪೆನಿಯ `ಸಫಾರಿ~ ಬ್ರೌಸಿಂಗ್ ಸಾಫ್ಟ್‌ವೇರ್‌ನಲ್ಲಿರುವ ಬಳಕೆದಾರರ `ವೈಯಕ್ತಿಕ ಸುರಕ್ಷತಾ ಆಯ್ಕೆ~ ವ್ಯವಸ್ಥೆಯನ್ನು ಉ್ಲ್ಲಲಂಘಿಸಿತ್ತು ಎಂದು ಆರೋಪಿಸಲಾಗಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT