ADVERTISEMENT

ಗೂಢಚರ್ಯೆಗೆ ಪ್ರೇಮಿಗಳಿಂದ ಫೇಸ್‌ಬುಕ್ ಬಳಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ಲಂಡನ್ (ಐಎಎನ್‌ಎಸ್): ಮಾಜಿ ಪ್ರಿಯಕರ ಅಥವಾ ಪ್ರಿಯತಮೆಯ ಬಗ್ಗೆ ಗೂಢಚರ್ಯೆಯಲ್ಲಿ ನೀವು ತೊಡಗಿದ್ದೀರಾ ? ಅದಕ್ಕಾಗಿ ನೀವು ಆರಿಸಿಕೊಂಡಿರುವುದು ಫೇಸ್‌ಬುಕ್ ಜಾಲ ತಾಣವೇ? ಹಾಗಿದ್ದರೆ ಈ ಕಾರ್ಯದಲ್ಲಿ ತೊಡಗಿರುವವರು ನೀವೊಬ್ಬರೇ ಅಲ್ಲ. ನಿಮ್ಮಂದಿಗೆ ಶೇ 90ರಷ್ಟು ಜನರಿದ್ದಾರೆ ಎನ್ನುತ್ತಿದೆ ನೂತನ ಸಂಶೋಧನೆ.

ಹೌದು. ತಮ್ಮ ಮಾಜಿ ಪ್ರೇಯಸಿ ಅಥವಾ ಪ್ರಿಯಕರನ ಚಲನವಲನಗಳ ಕುರಿತು ಮಾಹಿತಿ ಕಲೆ ಹಾಕಲು ಶೇ 90ರಷ್ಟು ಜನರು ಫೇಸ್‌ಬುಕ್‌ನ್ನು ಅವಲಂಬಿಸಿದ್ದಾರೆ ಎಂದು ಕೆನಡಾದ ಪಶ್ಚಿಮ ಒಂಟಾರಿಯೊ ವಿವಿಯ ವಿದ್ಯಾರ್ಥಿ ವೆರೊನಿಕಾ ಲೂಕಾಸ್ ಮಾಡಿದಸಂಶೋಧನೆ ತಿಳಿಸುತ್ತದೆ.

ಶೇ 88ರಷ್ಟು ಜನರು ತಮ್ಮ ಸ್ನೇಹಿತರ ಫೇಸ್‌ಬುಕ್ ಅಕೌಂಟ್‌ನಲ್ಲಿ ತಮ್ಮನ್ನು ನಿರಾಕರಿಸಿದ ವ್ಯಕ್ತಿಯ ಕುರಿತೇ ಹುಡುಕುತ್ತಾರೆ. ಬಹುತೇಕರು ಈ ರೀತಿಯ ಗೂಢಚರ್ಯೆ ಕಾರ್ಯದಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ. ಶೇ 74ರಷ್ಟು ಜನ ತಮ್ಮ ಮಾಜಿ ಪ್ರಿಯಕರ ಮತ್ತೆ ಪ್ರೀತಿಯ ಬಲೆಗೆ ಬಿದ್ದಿದ್ದಾರಾ ಎಂದು ಹುಡುಕುತ್ತಾರೆ. ಪ್ರೀತಿಯಿಂದ ವಂಚಿತರಾದ 18 ವರ್ಷಕ್ಕೂ ಹೆಚ್ಚಿನವರು ಹೆಚ್ಚಾಗಿ ಇದರಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಲೂಕಾಸ್ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.