ಬ್ಯೂನಸ್ ಐರಸ್ (ಐಎಎನ್ಎಸ್/ಇಎಫ್ಇ): ಪೋಷಕರು ಒಂಬತ್ತು ವರ್ಷಗಳಿಂದ ದೈಹಿಕ ಕಿರುಕುಳ ನೀಡಿ ಗ್ಯಾರೇಜ್ನಲ್ಲಿ ಕೂಡಿ ಹಾಕಿದ್ದ 15 ವರ್ಷದ ಬಾಲಕಿಯೊಬ್ಬಳನ್ನು ಅರ್ಜೆಂಟಿನಾ ಪೊಲೀಸರು ಬುಧವಾರ ರಕ್ಷಿಸಿದ್ದಾರೆ.
ಬಾಲಕಿಗೆ ಹಳೆಯ ಪಾತ್ರೆಯೊಂದರ ಮೂಲಕ ನೀರು ಹಾಗೂ ಬ್ರೆಡ್ ಅನ್ನು ನೀಡುತ್ತಿದ್ದರು. ಅಲ್ಲದೇ ಆಕೆಯನ್ನು ಕೂಡಿಹಾಕಿದ್ದ ಕೋಣೆಯಲ್ಲಿ ನಾಯಿ ಹಾಗೂ ಕೋತಿ ವಾಸವಾಗಿದ್ದವು. ದೈಹಿಕವಾಗಿ ಕುಗ್ಗಿ ಹೋಗಿರುವ ಬಾಲಕಿಯು ಕೇವಲ 20 ಕೆ.ಜಿ ತೂಕ ಇದ್ದಾಳೆ. ಪ್ರಾಣಿಗಳು ತಿಂದುಳಿದ ಆಹಾರವನ್ನು ಆಕೆಗೆ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹೊರ ಪ್ರಪಂಚದ ಸಂಪರ್ಕವೇ ಸಿಗದಂತೆ 9 ವರ್ಷಗಳ ಕಾಲ ಒಬ್ಬಳನ್ನೇ ಗ್ಯಾರೇಜ್ನಲ್ಲಿ ಕೂಡಿ ಹಾಕಿದ್ದರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಬಾಲಕಿಯ ನಿಜವಾದ ಪಾಲಕರು ತುಂಬಾ ಬಡವರಾಗಿದ್ದು, ಏಳು ಮಕ್ಕಳನ್ನು ಹೊಂದಿದ್ದಾರೆ. ಸಾಕಲು ಸಾಧ್ಯವಾಗದೇ ಈಕೆಯನ್ನು ಬೇರೇ ದಂಪತಿಗೆ ದತ್ತು ನೀಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.