ADVERTISEMENT

‘ಗ್ರೀನ್‌ಕಾರ್ಡ್‌’ಗೆ 12 ವರ್ಷ ಕಾಯಬೇಕು

ಪಿಟಿಐ
Published 11 ಜುಲೈ 2017, 19:00 IST
Last Updated 11 ಜುಲೈ 2017, 19:00 IST
‘ಗ್ರೀನ್‌ಕಾರ್ಡ್‌’ಗೆ  12 ವರ್ಷ ಕಾಯಬೇಕು
‘ಗ್ರೀನ್‌ಕಾರ್ಡ್‌’ಗೆ 12 ವರ್ಷ ಕಾಯಬೇಕು   

ವಾಷಿಂಗ್ಟನ್‌: ಅಮೆರಿಕದ ಗ್ರೀನ್‌ ಕಾರ್ಡ್‌ ಪಡೆಯಲು ಭಾರತೀಯರು 12 ವರ್ಷಗಳಷ್ಟು ಸುದೀರ್ಘ ಅವಧಿಗೆ ಕಾಯಬೇಕಿದೆ ಎಂದು ನೂತನ ಅಧ್ಯಯನ ವರದಿಯೊಂದು ತಿಳಿಸಿದೆ.

ಪ್ರತಿ ವರ್ಷ ಗ್ರೀನ್‌ ಕಾರ್ಡ್‌ ಪಡೆಯುವ ಪ್ರಮುಖ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ.

‘ಕೌಶಲ ಉದ್ಯೋಗಿಗಳಾಗಿ ಗ್ರೀನ್‌ ಕಾರ್ಡ್‌ಗೆ ಅರ್ಜಿ ಹಾಕಿರುವ ಭಾರತೀಯರು 12 ವರ್ಷಗಳ ಕಾಲ ಸರದಿಯಲ್ಲಿ ಕಾಯಬೇಕು.

ADVERTISEMENT

ಅಂದರೆ  2005ರ ಮೇ ತಿಂಗಳಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಸರ್ಕಾರ ಈಗ ಇತ್ಯರ್ಥಗೊಳಿಸುತ್ತಿದೆ’ ಎಂದು ‘ಪೆವ್‌’ ಅಧ್ಯಯನ ವರದಿ ತಿಳಿಸಿದೆ.
ಎಚ್‌–1 ಬಿ ವೀಸಾ ಹೊಂದಿರುವ ಶೇಕಡ 36ರಷ್ಟು ಅಂದರೆ 2.2 ಲಕ್ಷಕ್ಕೂ ಹೆಚ್ಚು ಜನರಿಗೆ 2010ರಿಂದ 2014ರ ಆರ್ಥಿಕ ವರ್ಷ ಅವಧಿಯಲ್ಲಿ ಗ್ರೀನ್‌ ಕಾರ್ಡ್‌ ನೀಡಲಾಗಿದೆ ಎಂದು ವರದಿ ಹೇಳಿದೆ.

2004ರಿಂದ ಪ್ರತಿ ಆರ್ಥಿಕ ವರ್ಷದಲ್ಲಿಯೂ, ಹೊಸದಾಗಿ ವಲಸೆ ಬರುವವರಿಗಿಂತ ಇತರೆ ವೀಸಾ ಅಡಿಯಲ್ಲಿ ಈಗಾಗಲೇ ವಾಸಿಸುತ್ತಿರುವ  ವಲಸಿಗರಿಗೇ ಹೆಚ್ಚಾಗಿ ಗ್ರೀನ್‌ ಕಾರ್ಡ್‌ ನೀಡಲಾಗುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಹಾಗೂ ಉದ್ಯೋಗಕ್ಕೆ ಗ್ರೀನ್‌ ಕಾರ್ಡ್‌ ಅವಕಾಶ ಕಲ್ಪಿಸುತ್ತದೆ.

ಗ್ರೀನ್‌ ಕಾರ್ಡ್‌ ಹೊಂದಿರುವವರು ಐದು ವರ್ಷಗಳ ವಾಸದ ಬಳಿಕ ಅಮೆರಿಕದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅಮೆರಿಕದ ನಾಗರಿಕರನ್ನು ಮದುವೆಯಾದರೆ ಕೇವಲ ಮೂರು ವರ್ಷಕ್ಕೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.