ADVERTISEMENT

ಗ್ವಾಟೆಮಾಲಾ ರಾಯಭಾರ ಕಚೇರಿ ಜೆರುಸಲೇಂಗೆ

ಏಜೆನ್ಸೀಸ್
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST

ವಾಷಿಂಗ್ಟನ್‌: ’ಇಸ್ರೇಲ್‌ನಲ್ಲಿರುವ ಗ್ವಾಟೆಮಾಲಾದ ರಾಯಭಾರ ಕಚೇರಿಯನ್ನು ಮೇ ತಿಂಗಳಲ್ಲಿ ಜೆರುಸಲೇಂಗೆ ಸ್ಥಳಾಂತರಿಸಲಾಗುವುದು’ ಎಂದು ಅಧ್ಯಕ್ಷ ಜಿಮ್ಮಿ ಮೊರಾಲಿಸ್ ಹೇಳಿದ್ದಾರೆ.

ಅಮೆರಿಕನ್‌ ಇಸ್ರೇಲ್‌ ಸಾರ್ವಜನಿಕ ವ್ಯವಹಾರಗಳ ಸಮಿತಿಯ(ಎಐಪಿಎಸಿ) ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಜಿಮ್ಮಿ ಮೊರಾಲಿಸ್, ‘ಇದೊಂದು ಮಹತ್ವದ ತೀರ್ಮಾನ. ನಾವು ಜೆರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿಯಾಗಿ ಗುರುತಿಸುತ್ತೇವೆ’ ಎಂದು ಹೇಳಿದ್ದಾರೆ.

‘ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಜೆರುಸಲೇಂನಲ್ಲೇ ಸ್ಥಾಪಿಸಲಿದ್ದೇವೆ. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.

ADVERTISEMENT

ರಾಯಭಾರ ಕಚೇರಿಯನ್ನು  ಜೆರುಸಲೇಂಗೆ ಸ್ಥಳಾಂತರಿಸುವ ಕುರಿತು ಟ್ರಂಪ್‌ ಅವರು ಡಿಸೆಂಬರ್‌ ತಿಂಗಳಲ್ಲಿ ತೀರ್ಮಾನ ಪ್ರಕಟಿಸಿದಾಗ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.