ADVERTISEMENT

ಚಂದ್ರನ ಒಳಮೈ ಅರಿವಿಗೆ ಯತ್ನ: ಅವಳಿ ಉಪಗ್ರಹ ಉಡಾವಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ವಾಷಿಂಗ್ಟನ್ (ಎಎಫ್‌ಪಿ): ಚಂದ್ರನ ಒಳಮೈ ಹೇಗಿದೆ ಎಂದು ಅರಿಯಲು ವಾಷಿಂಗ್ ಮೆಷಿನ್ ಗಾತ್ರದ ಎರಡು ಪುಟ್ಟ ಅವಳಿ ಉಪಗ್ರಹಗಳು ಶನಿವಾರ ಆಕಾಶದೆಡೆಗೆ ತಮ್ಮ ಪಯಣ ಬೆಳೆಸಿದವು.

ಫ್ಲಾರಿಡಾದ ವಾಯು ನೆಲೆಯಿಂದ ಬೆಳಿಗ್ಗೆ 9.08ಕ್ಕೆ ಈ ಉಪಗ್ರಹಗಳನ್ನು ಮೇಲಕ್ಕೆ ಹಾರಿಸಲಾಯಿತು. ಜಿಆರ್‌ಎಐಎಲ್ ಹೆಸರಿನ ಈ ಕಾರ್ಯಾಚರಣೆ ಮೂಲಕ ಚಂದ್ರನ ಒಳಮೈ ಅರಿವಿಗಾಗಿ ಮೂರು ತಿಂಗಳ ಕಾಲ ಯತ್ನಿಸಲಾಗುವುದು ಎಂದು ಈ ಯೋಜನೆಯ ವಿಜ್ಞಾನಿ ಬಾಬ್ಬಿ ಫಾಗೆಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.