ADVERTISEMENT

ಚಂದ್ರನ ಮೇಲೆ ಅಮೆರಿಕ ಸ್ಮಾರಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ವಾಷಿಂಗ್ಟ್‌ನ್(ಪಿಟಿಐ): ಚಂದ್ರನ ಮೇಲೆ ತನ್ನ ಯಾನಿಗಳು ಹಾಗೂ ಬಾಹ್ಯಾಕಾಶ ನೌಕೆ ಓಡಾಡಿದ ಸ್ಥಳದಲ್ಲಿ ಅಮೆರಿಕ ರಾಷ್ಟ್ರೀಯ ಸ್ಮಾರಕ ಸ್ಥಾಪಿಸಲು ಅಮೆರಿಕ ನಿರ್ಧರಿಸಿದೆ.

ಚಂದ್ರನ ಮೇಲೆ ಮೊದಲ ಬಾರಿಗೆ ಇಳಿದ ಅಪೊಲೊ ಬಾಹ್ಯಾಕಾಶ ನೌಕೆ ಸಂಚರಿಸಿದ ಸ್ಥಳಗಳನ್ನು ರಕ್ಷಿಸುವುದು ಇದರ ಉದ್ದೇಶ. ಈ ಸಂಬಂಧ ಸಂಸತ್‌ನಲ್ಲಿ  `ಅಪೊಲೊ ಲೂನಾರ್ ಲ್ಯಾಂಡಿಂಗ್ ಲೆಗಸಿ' ಮಸೂದೆ ಮಂಡಿಸಲಾಗಿದೆ.  ಅದನ್ನು ವಿಜ್ಞಾನ, ಅಂತರಿಕ್ಷ ಹಾಗೂ ತಂತ್ರಜ್ಞಾನ ಸಮಿತಿಯ  ಪರಿಶೀಲನೆಗಾಗಿ ಕಳುಹಿಸಲಾಗಿದೆ.

ಚಂದ್ರನ ಮೇಲೆ ಇಳಿದ ಅಪೊಲೊ ನೌಕೆಯ ಸಾಧನೆ ದೇಶದ ಅತ್ಯುನ್ನತ ಸಾಧನೆಗಳಲ್ಲೊಂದು ಎಂದಿರುವ ಅಮೆರಿಕ, ಅಪೊಲೊ ಸಂಚರಿಸಿದ ಸ್ಥಳಗಳನ್ನು ಇತರ ದೇಶಗಳು ಆಕ್ರಮಿಸಿಕೊಳ್ಳುವ ಮೊದಲು ರಕ್ಷಿಸಬೇಕಾಗಿದೆ' ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.