ADVERTISEMENT

ಚೀನಾದಲ್ಲಿ ಉಗ್ರರ ದಾಳಿಗೆ 27 ಸಾವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 20:08 IST
Last Updated 1 ಮಾರ್ಚ್ 2014, 20:08 IST

ಬೀಜಿಂಗ್‌(ಪಿಟಿಐ): ಚೀನಾದ ಕುನ್ಮಿಂಗ್‌ ನಗರದಲ್ಲಿ ಶನಿವಾರ ನಡೆದ  ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಮೃತಪಟ್ಟು 109 ಜನ ಗಾಯಗೊಂಡಿದ್ದಾರೆ.

‘ಚಾಕು ಹಿಡಿದು ಬಂದಿದ್ದ ಅಪರಿಚಿತ ವ್ಯಕ್ತಿಗಳು ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ಯುನಾನ್‌ ಪ್ರಾಂತ್ಯದ ಕುನ್ಮಿಂಗ್‌ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಈ ಘೋರ ದಾಳಿ ನಡೆಸಿದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಇದೊಂದು ಯೋಜಿತ ದಾಳಿ’ ಎಂದು  ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.