ADVERTISEMENT

ಚೀನಾ ಭೂಕಂಪ: 156 ಸಾವು

ಐದು ಸಾವಿರಕ್ಕೂ ಅಧಿಕ ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ಬೀಜಿಂಗ್ (ಐಎಎನ್‌ಎಸ್): ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶನಿವಾರ ಸಂಭವಿಸಿದ ಭೂಕಂಪನದಲ್ಲಿ ಪ್ರಾಥಮಿಕ ವರದಿಗಳ ಪ್ರಕಾರ 156 ಮಂದಿ ಸಾವನ್ನಪ್ಪಿದ್ದು, 5000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.   ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ  7 ಎಂದು ದಾಖಲಾಗಿದೆ.

ಶನಿವಾರ ಬೆಳಿಗ್ಗೆ 8.02 ಗಂಟೆ ಸಮಯದಲ್ಲಿ ಲುಶಾನ್ ಪ್ರಾಂತ್ಯದ ಯಾನ್ ನಗರದಲ್ಲಿ ಭೂಕಂಪನ ಸಂಭವಿಸಿದೆ ಎಂದು ಚೀನಾ ಭೂಕಂಪನ ಜಾಲ ಕೇಂದ್ರ (ಸಿಇಎನ್‌ಸಿ) ಕ್ಸಿನ್ಹಾ ಪತ್ರಿಕೆಗೆ ಮಾಹಿತಿ ನೀಡಿದೆ.

ಗಾಯಗೊಂಡಿರುವವರಲ್ಲಿ 135 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಅವಶೇಷಗಳಡಿ ಸಿಲುಕಿರುವ 27 ಮಂದಿಯನ್ನು ಪರಿಹಾರ ಕಾರ್ಯಪಡೆಯವರು ರಕ್ಷಿಸಿದ್ದಾರೆ ಎಂದು ಲುಶಾನ್ ಪ್ರಾಂತ್ಯದ ವಾರ್ತಾ ಸಚಿವಾಲಯದ ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಭೂಕಂಪನ ಸಂಭವಿಸಿರುವ ಯಾನ್ ನಗರದಲ್ಲಿ ನೀರು ಮತ್ತು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದೆ. ಹಳೆಯ ಪಟ್ಟಣದ ಪ್ರದೇಶದಲ್ಲಿರುವ ಕಟ್ಟಡಗಳು ನೆಲಸಮಗೊಂಡಿವೆ. ಭೂಕುಸಿತ ಉಂಟಾಗಿದ್ದು, ಪರಿಣಾಮವಾಗಿ ರಸ್ತೆಗಳು ಬಂದ್ ಆಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

ನಗರದಲ್ಲಿರುವ ಎರಡು ದೊಡ್ಡ ಸರೋವರಗಳು ದಂಡೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಪರಿಹಾರ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.