ಬೀಜಿಂಗ್(ಐಎಎನ್‌ಎಸ್): ಸೆಕೆಂಡ್‌ಗೆ 33.89 ಕ್ವಾಡ್ರಿಲಿಯನ್‌ನಷ್ಟು ಕಾರ್ಯಸಾಮರ್ಥ್ಯ, 54.9 ಕ್ವಾಡ್ರಿಯಲ್ ವೇಗದ ಕಾರ್ಯಕ್ಷಮತೆವುಳ್ಳ ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಚೀನಾ ಸೋಮವಾರ ಘೋಷಿಸಿದೆ.
`ಟಿಯಾನಿ-2' ಹೆಸರಿನ ಈ ಸೂಪರ್ ಕಂಪ್ಯೂಟರ್ ಅನ್ನು ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದೆ. ಅಮೆರಿಕದ `ಟೈಟಾನ್' ಸೂಪರ್ ಕಂಪ್ಯೂಟರ್ ಅನ್ನು ಮೀರಿಸಬಲ್ಲ `ಟಿಯಾನಿ-2' ಬೆಲೆ ಬರೋಬ್ಬರಿ ರೂ 550 ಕೋಟಿ! ಎಂದು ಕ್ಸಿನ್‌ಹುವಾ ವರದಿ ಮಾಡಿದೆ.
`ಟಿಯಾನಿ-1' ನವೆಂಬರ್ 2010ರಿಂದ ಜೂನ್ 2011ರ ಅವಧಿಯಲ್ಲಿ ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಕಂಪ್ಯೂಟರ್ ಅನ್ನು ಇದು ಜಪಾನ್‌ನ `ಕೆ' ಸೂಪರ್ ಕಂಪ್ಯೂಟರ್ ಹಿಂದಿಕ್ಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.