ADVERTISEMENT

ಜಪಾನಿನ ಈಶಾನ್ಯ ತೀರದಲ್ಲಿ 2000 ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:25 IST
Last Updated 14 ಮಾರ್ಚ್ 2011, 8:25 IST

ಟೋಕಿಯೊ, (ಐಎಎನ್ ಎಸ್): ಜಪಾನಿನ ಈಶಾನ್ಯ ಪ್ರದೇಶದ ಮಿಯಾಗಿಯಲ್ಲಿ ಕಳೆದವಾರ ಸಂಭವಿಸಿದ ದೊಡ್ಡ  ಪ್ರಮಾಣದ ಭೂಕಂಪದಿಂದಾದ ಭಾರಿ ಗಾತ್ರದ ಸುನಾಮಿ ಹಾವಳಿಯ ಪರಿಣಾಮವಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಸೋಮವಾರ ಜಪಾನಿನ  ಎರಡು ತೀರಗಳಲ್ಲಿ ಒಟ್ಟು  ಸುಮಾರು ಎರಡು ಸಾವಿರ ಮೃತದೇಹಗಳು ಪತ್ತೆಯಾಗಿವೆ.

ಒಜಿಕಾ ಪರ್ಯಾಯ ದ್ವೀಪದ ತೀರದಲ್ಲಿ 1000  ಮತ್ತು ಮಿನಾಮಿಸನ್ರಿಕು ಪಟ್ಟಣದ ಸಮುದ್ರ ತೀರದಲ್ಲಿ 1000 ಶವಗಳು ಪತ್ತೆಯಾಗಿವೆ. ಕಳೆದ ಶುಕ್ರವಾರ, ಜಪಾನಿನ ಈಶಾನ್ಯ ಪ್ರದೇಶ ಭಾರಿ ಭೂಕಂಪದಿಂದ ನಲುಗಿದೆ. ಸತ್ತವರ ಸಂಖ್ಯೆ    ಇನ್ನೂ ಹೆಚ್ಚಾಗ ಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.

ಇದುವರೆಗೆ ಒಟ್ಟು 15,000 ಜನರನ್ನು ರಕ್ಷಿಸಲಾಗಿದೆ ಎಂದು ಪ್ರಧಾನಿ ನಾಟೊ ಕನ್ ಅವರು ತಿಳಿಸಿದ್ದಾರೆಂದು ಡಿಪಿಎ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

ಶುಕ್ರವಾರ ಸಂಭವಿಸಿದ ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದ ಪ್ರಕಾರ 9.0 ರಷ್ಟಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.