ADVERTISEMENT

ಜಹೀರುಲ್ ಇಸ್ಲಾಂ ಪಾಕ್ ಐಎಸ್‌ಐ ನೂತನ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಲೆಫ್ಟಿನೆಂಟ್ ಜನರಲ್ ಜಹೀರುಲ್ ಇಸ್ಲಾಂ  ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ನೂತನ ಮುಖ್ಯಸ್ಥರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಜನರಲ್ ಷುಜಾ ಪಾಶಾ ಭಾನುವಾರ ನಿವೃತ್ತಿಯಾದ ಹಿನ್ನೆಲೆಯಲ್ಲಿ  ಅವರ ಸ್ಥಾನಕ್ಕೆ ಇಸ್ಲಾಂ ಅವರ ನೇಮಕವಾಗಿದೆ. 2010ರಲ್ಲಿ ನಿವೃತ್ತಿ ವಯಸ್ಸು ತಲುಪಿದ್ದ ಪಾಶಾ ಅವರನ್ನು ಎರಡು ಬಾರಿ ಸೇವೆಯಲ್ಲಿ ಮುಂದುವರಿಸಲಾಗಿತ್ತು. ಇಸ್ಲಾಂ ಅವರು ಈ ಮೊದಲು ಐಎಸ್‌ಐನಲ್ಲಿ ಉಪ ಪ್ರಧಾನ ನಿರ್ದೇಶಕರಾಗಿದ್ದರು.

ವಾಯುಪಡೆಗೆ ನೂತನ ಮುಖ್ಯಸ್ಥರು: ಪಾಕ್ ವಾಯುಪಡೆಯ ನೂತನ ಮುಖ್ಯಸ್ಥರಾಗಿ  ಏರ್ ಮಾರ್ಷಲ್ ತಹೀರ್    ರಫೀಕ್ ಬಟ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.