ADVERTISEMENT

ಜಾಗತಿಕ ಭೂಪಟದಿಂದ ಅಳಿಸಿ ಹೋಗುವ ಹವಾಯಿ ದ್ವೀಪ!

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ವಾಷಿಂಗ್ಟನ್ (ಪಿಟಿಐ): ಹವಾಯಿಯ ಕೆಲವು ದ್ವೀಪಗಳು ಭವಿಷ್ಯದಲ್ಲಿ ವಿಶ್ವ ಭೂಪಟದಿಂದ ಸಂಪೂರ್ಣವಾಗಿ ಅಳಿಸಿ ಹೋಗಲಿವೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.

ಹವಾಯಿಯ ಮೂರನೇ ಅತಿದೊಡ್ಡ ಓವು ದ್ವೀಪದಲ್ಲಿ ವಿಜ್ಞಾನಿಗಳು ನೀರಿನ ಕೆಲವು ಬುಗ್ಗೆಗಳನ್ನು ಪತ್ತೆ ಹಚ್ಚಿದ್ದಾರೆ. ಇವುಗಳಿಂದ ಭೂಮಿ ಸವೆದು ದಿನಗಳೆದಂತೆ ನೀರಿನ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ ಎಂದು ತಿಳಿಸಿದ್ದಾರೆ.

`ಈ ದ್ವೀಪಗಳಲ್ಲಿ ಪರಿಸರ ಬದಲಾಗುತ್ತಿರುವುದು ಮತ್ತು ಇವುಗಳ ವಿಸ್ತೀರ್ಣ ಕಡಿಮೆಯಾಗುತ್ತಿರುವ ಕಾರಣವನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ' ಎಂದು ಭೂವಿಜ್ಞಾನಿ ಸ್ಟೀವ್ ನೆಲ್ಸನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.