ADVERTISEMENT

ಜೆಸಿಂತಾ ಸಾವು ಸಾಕ್ಷ್ಯ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಲಂಡನ್ (ಪಿಟಿಐ): ಕೀಟಲೆ ಕರೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನಾ ಅವರ ಸಾವಿಗೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯವನ್ನು ಆಸ್ಟ್ರೇಲಿಯಾದ ರೇಡಿಯೊ ಕೇಂದ್ರವನ್ನು ಪ್ರತಿನಿಧಿಸಿರುವ ಕಾನೂನು ತಂಡಕ್ಕೆ ಹಸ್ತಾಂತರಿಸಲಾಗಿದೆ.

ಜೆಸಿಂತಾ ಸಾವಿನ ಕುರಿತು ಕಳೆದ ವಾರ ವೆಸ್ಟ್‌ಮಿನಿಸ್ಟರ್ ಕೊರೊನರ್ ನ್ಯಾಯಾಲಯದಲ್ಲಿ ಮಹಜರು ಆರಂಭಗೊಂಡಿತ್ತು. ಜೆಸಿಂತಾ ಅವರು ಆತ್ಮಹತ್ಯೆಗೆ ಮುನ್ನ ಬರೆದ ಮೂರು ಪತ್ರಗಳ ಪ್ರತಿಗಳು, ಪೊಲೀಸ್ ವರದಿ, ವಿಷ ವಿಜ್ಞಾನ ಫಲಿತಾಂಶ, ಕರ್ತವ್ಯನಿರತ ನರ್ಸ್ ಹೇಳಿಕೆ ಮುಂತಾದವುಗಳನ್ನು ನ್ಯಾಯಾಲಯ ಶುಕ್ರವಾರ ಹಸ್ತಾಂತರಿಸಿತು.
ಜೆಸಿಂತಾ ಈ ಹಿಂದೆ ಭಾರತಕ್ಕೆ ಆಗಮಿಸಿದ್ದಾಗ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಹಿನ್ನೆಲೆಯಲ್ಲಿ ಖಿನ್ನತೆ ನಿವಾರಣೆಗಾಗಿ ಭಾರತದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದೂ ಕೆಲವು ವರದಿಗಳು ಸೂಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.