ADVERTISEMENT

ಟಿವಿ ನಿರೂಪಕಿಯ ಮುಖ ಕಚ್ಚಿದ ನಾಯಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ವಾಷಿಂಗ್ಟನ್(ಐಎಎನ್‌ಎಸ್): ಖಾಸಗಿ ಟಿ.ವಿ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮದ ಸಂದರ್ಭದಲ್ಲಿ ನಾಯಿಯೊಂದು ನಿರೂಪಕಿಯ ಮುಖವನ್ನು ಕಚ್ಚಿ ವಿರೂಪಗೊಳಿಸಿದ ಘಟನೆ ಕೊಲೊರಾಡೋದಲ್ಲಿ ವರದಿಯಾಗಿದೆ.

 ಕೆಯುಎಸ್‌ಎ ಟಿ.ವಿ ಚಾನೆಲ್ ನಿರೂಪಕಿ ಕೈಲ್ ಡೈರ್ ಅವರು ಬೆಳಗಿನ ವೇಳೆಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಸಿಕೊಡುವಾಗ 85 ಪೌಂಡ್ ತೂಕದ ಬಲಶಾಲಿ (ಅರ್ಜೆಂಟಿನಾ ಮ್ಯಾಸ್ಟಿಫ್) ನಾಯಿಯನ್ನು ಮುದ್ದು ಮಾಡಲು ಬಗ್ಗಿದಾಗ ಅದು ಅವರ ಮುಖವನ್ನು ಬಲವಾಗಿ ಕಚ್ಚಿದೆ. ತೀವ್ರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲುಗೊಳಿಸಲಾಯಿತು. ಮುಖ ಮೂಲ ಸ್ವರೂಪಕ್ಕೆ ಬರಲು ಬುಧವಾರ ಶಸ್ತ್ರಕ್ರಿಯೆ ನಡೆಸಲಾಯಿತು ಎಂದು `ದಿ ಡೈಲಿ ಮೇಲ್~ ವರದಿ ಮಾಡಿದೆ.

ಇಲ್ಲಿ ತೀವ್ರ ಚಳಿಯ ವಾತಾವರಣ ಇದ್ದು, ಹೆಪ್ಪುಗಟ್ಟಿದ ಕೊಳದಿಂದ ಆ ನಾಯಿಯನ್ನು  ಹೊರ ತೆಗೆಯಲಾಗಿತ್ತು. ಇದರ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಚರ್ಚೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.