ADVERTISEMENT

ಡೈನೋಸಾರ್‌ಗೂ ಹಲ್ಲು ನೋವಿತ್ತಾ?

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ಬೀಜಿಂಗ್ (ಪಿಟಿಐ): ಭೂಮಿಯ ಮೇಲೆ ಮೊದಲು ಬಾರಿಗೆ ಹಲ್ಲು ನೋವು ಅನುಭವಿಸಿದ ಪ್ರಾಣಿ ಯಾವುದಿರಬಹುದು ಎಂಬ ಅಸಹಜ ಪ್ರಶ್ನೆಗೆ ಅಮೆರಿಕ, ಕೆನಡಾ ಮತ್ತು ಚೀನಾದ ವಿಜ್ಞಾನಿಗಳ ಜಂಟಿ ತಂಡ ಉತ್ತರ ಹುಡುಕಿದೆ.

ಡೈನೋಸಾರ್ ಪ್ರಬೇಧಕ್ಕೆ ಸೇರಿದ ಸೈನೋಸಾರಸ್ ಎಂಬ ದೈತ್ಯ ಸರಿಸೃಪ ತೀವ್ರ ಹಲ್ಲು ನೋವು ಅನುಭವಿಸಿದ ಮೊದಲ ಪ್ರಾಣಿಯಾಗಿರಬಹುದು ಎಂಬ ಅಭಿಪ್ರಾಯಕ್ಕೆ ಈ ವಿಜ್ಞಾನಿಗಳು ಬಂದಿದ್ದಾರೆ. 

ಚೀನಾದ ಯುನಾನ್ ಪ್ರಾಂತ್ಯದ ಲುಫೆಂಗ್ ನದಿಪಾತ್ರದಲ್ಲಿ 2007ರಲ್ಲಿ ದೊರೆತ ಸೈನೋಸಾರಸ್ ಅಸ್ಥಿಪಂಜರದ ಅಧ್ಯಯನದ ನಂತರ ವಿಜ್ಞಾನಿಗಳು ಈ ಒಮ್ಮತಕ್ಕೆ ಬಂದಿದ್ದಾರೆ. ಸೈನೋಸಾರಸ್ ಹಲ್ಲಿನ ಮೂಳೆಯ ಕ್ಷ-ಕಿರಣ ಪರೀಕ್ಷೆಯಿಂದ ಈ ಪ್ರಾಣಿ ತೀವ್ರ ಹಲ್ಲು ನೋವು ಅನುಭವಿಸಿತ್ತು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.