ADVERTISEMENT

`ಡೌನ್ ಸಿಂಡ್ರೋಮ್' ಬಾಲಕನ ಪರ್ವತಾರೋಹಣ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ನ್ಯೂಯಾರ್ಕ್ (ಪಿಟಿಐ): `ಡೌನ್‌ಸಿಂಡ್ರೋಮ್' (ಮಾನಸಿಕ, ದೈಹಿಕ ನ್ಯೂನತೆ) ಇರುವ 15 ವರ್ಷದ ಅಮೆರಿಕದ ಬಾಲಕನೊಬ್ಬ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿ ದಾಖಲೆ ನಿರ್ಮಿಸಲು ಹೊರಟಿದ್ದಾನೆ.

ಎಲಿ ರೈಮರ್, ಕಳೆದ ತಿಂಗಳು ಪರ್ವತಾರೋಹಣ ಕೈಗೊಂಡಿದ್ದು, ಈವರೆಗೆ 17,600 ಅಡಿ ಎತ್ತರ ಏರಿದ್ದಾನೆ. `ನಡಿಗೆಯ ಮೂಲಕ ಇದುವರೆಗೆ ಸುಮಾರು 113 ಕಿ.ಮೀ ಕ್ರಮಿಸಿ ಈತ ವಿಜಯಪತಾಕೆ ಹಾರಿಸಿದ' ಎಂದು `ನ್ಯೂಯಾರ್ಕ್ ಡೈಲಿ ನ್ಯೂಸ್' ವರದಿ ಮಾಡಿದೆ.

ತಮ್ಮ ಕುಟುಂಬದ ಎಲಿಶಾ ಫೌಂಡೇಷನ್‌ಗೆ ಹಣ ಸಂಗ್ರಹಿಸುವ ಸಲುವಾಗಿ ಬಾಲಕ ಪರ್ವತಾರೋಹಣ ಕೈಗೊಂಡಿದ್ದು, ಮಗನ ಸಾಧನೆ ಬೆಂಬಲಿಸಿ ತಂದೆ ಜಸ್ಟಿನ್ ರೈಮರ್ ಕೂಡ ಕಳೆದ ತಿಂಗಳು ಪರ್ವತಾರೋಹಿಗಳ ತಂಡ ಸೇರಿದ್ದರು.

80ರಲ್ಲೂ ಎವರೆಸ್ಟ್ ಏರುವ ತವಕ...

ಕಠ್ಮಂಡು : ನಾಲ್ಕು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ, ಜಪಾನ್‌ನ 80 ವರ್ಷದ ವೃದ್ಧರೊಬ್ಬರು ಮೂರನೇ ಬಾರಿಗೆ ಮೌಂಟ್ ಎವರೆಸ್ಟ್ ಏರಲು ಸಜ್ಜಾಗಿದ್ದಾರೆ. ಆ ಮೂಲಕ ವಿಶ್ವದ ಅತಿ ಎತ್ತರದ ಶಿಖರ ಏರಿದ ಮೊದಲ ಹಿರಿಯ ವ್ಯಕ್ತಿ ಎಂಬ ದಾಖಲೆ ಬರೆಯಲು ಮುಂದಾಗಿದ್ದಾರೆ. ಯಿಚಿರೋ ಮಿವುರಾ ಎಂಬ ಈ ವ್ಯಕ್ತಿ 2003 ಹಾಗೂ 2008ರಲ್ಲಿ 8,850 ಮೀಟರ್ ಎತ್ತರ (29,035 ಅಡಿ)  ಏರಿದ್ದರು. 1970 ರಲ್ಲೂ 8,000 ಮೀಟರ್(26,246 ಅಡಿ)ವರೆಗೆ ಎವರೆಸ್ಟ್ ನಡಿಗೆ ಕೈಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.