ವಾಷಿಂಗ್ಟನ್ (ಪಿಟಿಐ): ಮೆದುಳು ಕೋಶಗಳ ಅದರಲ್ಲೂ ಮುಖ್ಯವಾಗಿ ಕಲಿಯುವಿಕೆಗೆ ಸಂಬಂಧಿಸಿದ ಕೋಶಗಳ ಬೆಳವಣಿಗೆಗೆ ಉತ್ತೇಜನ ನೀಡುವ ಕೃತಕವಾಗಿ ತಳಿ ಮಾರ್ಪಾಡು ಮಾಡುವ ಪ್ರಕ್ರಿಯೆಯನ್ನು ಪತ್ತೆಹಚ್ಚಿರುವುದಾಗಿ ಟೆಕ್ಸಾಸ್ ವಿವಿಯ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಸಂಶೋಧನೆಗಾಗಿ ಇಲಿಗಳಲ್ಲಿರುವ ಎನ್‌ಎಫ್1 ವಂಶವಾಹಿಯನ್ನು ತೆಗೆದುಹಾಕಿರುವ ವಿಜ್ಞಾನಿಗಳು, ಇದರಿಂದಾಗಿ ಇಲಿಗಳಿಗೆ ವಯಸ್ಸಾಗುತ್ತಿದ್ದಂತೆ ಅವುಗಳ ಮೆದುಳಿನಲ್ಲಿ ನ್ಯೂರಾನ್‌ಗಳ (ನರಕೋಶ) ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.