ADVERTISEMENT

ತಾಂಜಾನಿಯದಲ್ಲಿ ದುರಂತ: ದೋಣಿ ಮಗುಚಿ 200 ಸಾವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 20:25 IST
Last Updated 10 ಸೆಪ್ಟೆಂಬರ್ 2011, 20:25 IST

ಜಂಜೀಬರ್ (ಎಎಫ್‌ಪಿ): ತಾಂಜಾನಿಯದ ಜನಪ್ರಿಯ ಪ್ರವಾಸಿ ತಾಣವಾದ ಇಲ್ಲಿ ಶನಿವಾರ ದೋಣಿ ಮಗುಚಿ ಸುಮಾರು 200 ಜನ ನೀರುಪಾಲಾಗಿದ್ದಾರೆ. ದೋಣಿಯಲ್ಲಿ ಅಂದಾಜು 800 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಇವರಲ್ಲಿ 600 ಮಂದಿಯನ್ನು ರಕ್ಷಿಸಲಾಗಿದೆ.

ಸಂತ್ರಸ್ತರಲ್ಲಿ ರಂಜಾನ್ ರಜೆಯ ಪ್ರವಾಸ ಮುಗಿಸಿ ಮನೆಗಳಿಗೆ ಹಿಂದಿರುಗುತ್ತಿದ್ದ ಕುಟುಂಬಗಳೇ ಸಾಕಷ್ಟು ಸಂಖ್ಯೆಯಲ್ಲಿ ಸೇರಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.