ADVERTISEMENT

ತಾಂಜಾನಿಯಾ: ಸ್ಫೋಟಕ್ಕೆ 25 ಬಲಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 16:55 IST
Last Updated 17 ಫೆಬ್ರುವರಿ 2011, 16:55 IST

ದಾರ್-ಏಸ್-ಸಲಾಮ್ (ಎಎಫ್‌ಪಿ): ತಾಂಜಾನಿಯಾದ ರಾಜಧಾನಿಯಲ್ಲಿರುವ ಸೇನಾ ಪಡೆಯ ಶಸ್ತ್ರಾಸ್ತ್ರಗಳ ಉಗ್ರಾಣದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಕನಿಷ್ಠ 25 ಜನರು ಮೃತಪಟ್ಟಿದ್ದು 145 ಜನ ಗಾಯಗೊಂಡಿದ್ದಾರೆ. 

  ಗೊಂಬೊ  ಲಾಬೊಟೊದ ಸೇನೆನೆಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಟನೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ನಾಶವಾಗಿವೆ ಎಂದು ಪ್ರಧಾನಿ ಮಿಜೆಂಗೊ ಪಿಂಡಾ ಗುರುವಾರ ತಿಳಿಸಿದ್ದಾರೆ.  
  
  200ಕ್ಕೂ ಹೆಚ್ಚು ಮಕ್ಕಳು ಪೋಷಕರ ಪತ್ತೆಗೆ ಪರದಾಡುತ್ತಿದ್ದಾರೆ. ಹಲವಾರು ಮನೆಗಳು ಶಾಲೆಗಳು ನೆಲಸಮಗೊಂಡಿವೆ ಎಂದು ಅವರು ಗುರುವಾರ ದೇಶದ ಸಂಸತ್ತಿಗೆ ತಿಳಿಸಿದರು. ಪ್ರಧಾನಿ ಅವರ ಭಾಷಣವನ್ನು ಸರ್ಕಾರಿ ಸ್ವಾಮ್ಯದ ರೇಡಿಯೊ ನೇರಪ್ರಸಾರ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.