ADVERTISEMENT

ಥಾಯ್ಲೆಂಡ್‌: ಹೋರಾಟ ಮುಂದುವರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಬ್ಯಾಂಕಾಕ್‌ (ಪಿಟಿಐ): ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆ ತಾರಕಕ್ಕೇರಿದ್ದು, ದೊರೆ ಭೂಮಿಬಲ್‌ ಅದುಲ್ಯದೇಜ್ ಅವರ 86ನೇ ಹುಟ್ಟುಹಬ್ಬದ ನಡುವೆಯೂ ಪ್ರಧಾನಿ ಯಿಂಗ್ಲುಕ್‌ ಶಿನವಾತ್ರ ಅವರ ವಿರುದ್ಧ ಪ್ರತಿಭಟನೆ ಮುಂದುವರಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಈ ಕುರಿತು ಬುಧವಾರ ಥಾಯ್ಲೆಂಡಿನ ರಾಷ್ಟ್ರೀಯ ಪೊಲೀಸ್‌ ಕೇಂದ್ರ ಕಚೇರಿ­ಯಲ್ಲಿ ಸಭೆ ನಡೆಸಿದ ಹೋರಾಟಗಾರರು ಪ್ರಧಾನಿ ವಿರುದ್ಧ ಹೋರಾಟ ತೀವ್ರ­ಗೊಳಿಸುವ ಕುರಿತು ತೀರ್ಮಾನಿಸಿದರು.

ಪ್ರಧಾನಿ ಯಿಂಗ್ಲುಕ್ ಶಿನವಾತ್ರ ರಾಜೀನಾಮೆಗೆ ಆಗ್ರಹಿಸಿ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಥಾಯ್ಲೆಂಡಿನ ಪ್ರಮುಖ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.