ADVERTISEMENT

ದಕ್ಷಿಣ ಕೊರಿಯಾ ಮೊದಲ ಮಹಿಳಾ ಅಧ್ಯಕ್ಷೆ ಗ್ವೀನ್

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ಸೋಲ್‌ನಲ್ಲಿ ಗುರುವಾರ ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸಾಯಿನುರಿ ಪಕ್ಷದ ನಾಯಕಿ ಪಾರ್ಕ್ ಗ್ವೀನ್ ಹೈ ತಮ್ಮ ಬೆಂಬಲಿಗರೊಂದಿಗೆ ವಿಜಯ ಘೋಷಣೆ ಮಾಡಿದರು 	-ಎಎಫ್‌ಪಿ ಚಿತ್ರ
ಸೋಲ್‌ನಲ್ಲಿ ಗುರುವಾರ ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸಾಯಿನುರಿ ಪಕ್ಷದ ನಾಯಕಿ ಪಾರ್ಕ್ ಗ್ವೀನ್ ಹೈ ತಮ್ಮ ಬೆಂಬಲಿಗರೊಂದಿಗೆ ವಿಜಯ ಘೋಷಣೆ ಮಾಡಿದರು -ಎಎಫ್‌ಪಿ ಚಿತ್ರ   
ಸೋಲ್ (ಐಎಎನ್‌ಎಸ್): ಬುಧವಾರ ನಡೆದ ದಕ್ಷಿಣ ಕೊರಿಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಸಾಯಿನುರಿ ಪಕ್ಷದ ಪಾರ್ಕ್ ಗ್ವೀನ್- ಹೈ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ದೇಶದ ಮೊದಲ ಮಹಿಳಾ ಅಧ್ಯಕ್ಷರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
 
60 ವರ್ಷದ ಗ್ವೀನ್, ದಕ್ಷಿಣ ಕೊರಿಯಾದ ಸರ್ವಾಧಿಕಾರಿ ಪಾರ್ಕ್ ಚುಂಗ್ ಹೀ ಪುತ್ರಿ. ಒಟ್ಟು ಮತಗಳ ಪೈಕಿ ಸಾಯಿನುರಿ ಪಕ್ಷ  ಶೇ 51.7ರಷ್ಟು ಮತಗಳನ್ನು ಪಡೆದುಕೊಂಡಿದೆ. ಪ್ರಮುಖ ವಿರೋಧ ಪಕ್ಷ ಡೆಮಾಕ್ರಟಿಕ್ ಯುನೈಟೆಡ್ ಪಾರ್ಟಿ ಶೇ 47.9ರಷ್ಟು ಮತ ಪಡೆದು ಸೋಲು ಅನುಭವಿಸಿದೆ. 
 
ದಕ್ಷಿಣ ಕೊರಿಯಾದಲ್ಲಿ 1987ರಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯಡಿ ಚುನಾವಣೆ ನಡೆಸಲಾಗುತ್ತಿದೆ. ಚುನಾವಣೆಯಲ್ಲಿ ಒಟ್ಟು ಶೇ 75.8ರಷ್ಟು ಮತದಾನ ನಡೆದಿತ್ತು. ಚುನಾವಣಾ ಆಯೋಗದ ಪ್ರಕಾರ, 15 ವರ್ಷಗಳ ಬಳಿಕ ನಡೆದ ದಾಖಲೆ ಪ್ರಮಾಣದ ಮತದಾನ ಇದಾಗಿದೆ.
 
`ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುತ್ತೇನೆ. ಜನರ ಏಳಿಗೆಗೆ ಶ್ರಮಿಸುತ್ತೇನೆ' ಎಂದು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಗ್ವೀನ್  ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
 
ಒಬಾಮ ಅಭಿನಂದನೆ (ವಾಷಿಂಗ್ಟನ್ ವರದಿ): ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಾರ್ಕ್ ಗ್ವೀನ್ ಹೈ ಅವರಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅಭಿನಂದಿಸಿದ್ದಾರೆ. 
 
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.