ದುಬೈ (ಪಿಟಿಐ): ಮಧ್ಯಪೂರ್ವ ಹಾಗೂ ಉತ್ತರ ಆಫ್ರಿಕಾ ರಾಷ್ಟ್ರಗಳ ಬಾಸ್ಮತಿ ಅಕ್ಕಿ ಗ್ರಾಹಕರ ಬೇಡಿಕೆ ಪೂರೈಸಲು ಸೌದಿ ಅರೇಬಿಯ ಹಾಗೂ ಭಾರತ ಜಂಟಿ ಸಹಭಾಗಿತ್ವದಲ್ಲಿ ದುಬೈನಲ್ಲಿ ‘ಬಾಸ್ಮತಿ ಅಕ್ಕಿ ಹಬ್’ ಆರಂಭಿಸಲಾಗಿದೆ.
ಬಾಸ್ಮತಿ ಅಕ್ಕಿಯ ದಾಸ್ತಾನು ಹಾಗೂ ವಿತರಣೆ ಕಾರ್ಯ ಇಲ್ಲಿಂದ ನಡೆಯಲಿದ್ದು, ರಾಜಕುಮಾರ ಮಿಷಾಲ್ ಉರ್ಫ್ ಅಬ್ದುಲ್ಲ ತುರ್ಕಿ, ಅಬ್ದುಲ್ಲ ಅವರ ಎರಡನೇ ಪುತ್ರ ಅಬ್ದುಲ್ ಅಜೀಜ್ ಅಲ್‌ಸೌದ್, ಜಾಗತಿಕ ಖಾಸಗಿ ಹೂಡಿಕೆದಾರ ವಿ. ರಮಣ್ ಕುಮಾರ್ ಅವರುಗಳು ಭಾರತದ ಪ್ರಮುಖ ಅಕ್ಕಿ ಸಂಗ್ರಹದಾರ ಕಂಪೆನಿ ಲಕ್ಷ್ಮಿ ಎನರ್ಜಿ ಆ್ಯಂಡ್ ಫುಡ್‌್ಸ ಲಿಮಿಟೆಡ್ (ಲೀಫ್ ಇಂಡಿಯಾ) ನೊಂದಿಗೆ ಒಪ್ಪಂದ ಮಾಡಿ ಕೊಂಡಿದ್ದಾರೆ.
ಮೊದಲ ವರ್ಷ ಒಂದು ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ದುಬೈನ ಜಬೇಲಾಲಿ ಎಂಬಲ್ಲಿ ದಾಸ್ತಾನು ಮಾಡುವ ಹೊಣೆಯನ್ನು ‘ಪ್ಯಾನ್ ಗಲ್‌್ಫ ಫುಡ್ ಆ್ಯಂಡ್ ಇಂಡಸ್ಟ್ರೀಸ್’ ಹೊತ್ತುಕೊಂಡಿದೆ. ಅಕ್ಕಿಯ ದಾಸ್ತಾನು ಜತೆಗೆ ಸಂಸ್ಕರಣೆ, ಪಾಲಿಷ್ ಮಾಡುವಿಕೆ ಹಾಗೂ ಪ್ಯಾಕಿಂಗ್ ಕಾರ್ಯವೂ ಇಲ್ಲಿಯೇ ನಡೆಯಲಿದೆ. ಇದಕ್ಕಾಗಿ ಮುಂದಿನ ಒಂದು ವರ್ಷಕ್ಕೆ ಸುಮಾರು ₨ 16.73 ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.
ಸೌದಿ ಅರೇಬಿಯಾ ಸೇರಿದಂತೆ ಯೆಮೆನ್, ಇರಾನ್, ಇರಾಕ್, ಬಹರೇನ್, ಒಮಾನ್, ಯುಎಇ ಹಾಗೂ ಕುವೈತ್‌ನಲ್ಲಿ ಬಾಸ್ಮತಿ ಅಕ್ಕಿಗೆ ಅಧಿಕ ಬೇಡಿಕೆ ಇದ್ದು, ಈ ರಾಷ್ಟ್ರಗಳಲ್ಲಿ ಪ್ರತಿವರ್ಷ 4೦ ಲಕ್ಷ ಟನ್ ಇಂತಹ ಅಕ್ಕಿಯ ಬಳಕೆಯಾಗುತ್ತಿದೆ. ಲೀಫ್ ಕಂಪೆನಿಯ ಪ್ರತಿಷ್ಠಿತ ಬ್ರಾಂಡ್‌ಗಳಾದ ಬಿಗ್ ಡ್ಯಾಡ್, ಅಂಕಲ್ ಚೆಫ್, ಲಜೀಜ್ ಹಾಗೂ ಆಫ್ರಿನ್ ಹೆಸರಿನ ಬಾಸ್ಮತಿ ಅಕ್ಕಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.